Thursday, October 3, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ್ವಿಚಕ್ರವಾಹನಗಳನಡುವೆ ಮುಖಾ ಮುಖಿ ಡಿಕ್ಕಿ-ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃ*ತ್ಯು-ಕಹಳೆ ನ್ಯೂಸ್

ಬಂಟ್ವಾಳ : ದ್ವಿಚಕ್ರವಾಹನಳೆರಡರ ಮಧ್ಯೆ ಮೆಲ್ಕಾರ್ ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಆ. 2 ರಂದು ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ.

ಬರಿಮಾರು ನಿವಾಸಿ ಸರ್ಪಾಝ್ ( 33) ಮೃತಪಟ್ಟ ವ್ಯಕ್ತಿಯಾಗಿದ್ದು, ಸಹಸವಾರಿಣಿ ವಿದ್ಯಾರ್ಥಿ ಜಾಸ್ಮೀನ್ ( 18) ಗಾಯಳು ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಪಾಝ್ ಅವರು ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ತಲುಪಿದಾಗ ಎದುರಿನಿಂದ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಇಂಮ್ತಿಯಾಜ್ ಎಂಬಾತ ಇವರ ವಾಹನಕ್ಕೆಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ರಭಸಕ್ಕೆ ಸ್ಕೂಟರ್ ಸವಾರ ಹಾಗೂ ಸಹಸವಾರಿಣಿ ಅಣ್ಣ ತಂಗಿ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯವಾಗಿತ್ತು.

ಜಾಹೀರಾತು
ಜಾಹೀರಾತು

ಕೂಡಲೇ ಇಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗಂಭೀರವಾಗಿ ಏಟಾಗಿದ್ದ ಸರ್ಪಾಝ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿದ್ದಾರೆ.