ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಜಟಾಪಟಿಗೆ ಮುಖ್ಯ ಕಾರಣ ವಿತ್ತ ಸಚಿವಾಲಯ ಇತ್ತಿಚೆಗೆ ಮುಂದಿಟ್ಟ ಪ್ರಸ್ತಾವಣೆಯಾಗಿದೆ.
ಈ ಪ್ರಸ್ತಾವನೆಯಂತೆ ಸಚಿವಾಲಯವು ಆರ್ ಬಿಐನ ಒಟ್ಟು ರೂ 9.59 ಲಕ್ಷ ಕೋಟಿ ಮೀಸಲು ನಿಧಿಯ ಮೂರನೇ ಒಂದಂಶಕ್ಕಿಂತಲೂ ಹೆಚ್ಚು, ಅಂದರೆ ರೂ 3.6 ಲಕ್ಷ ಕೋಟಿ ಮೀಸಲು ನಿಧಿಯನ್ನು ತನಗೆ ವರ್ಗಾಯಿಸಬೇಕೆಂದು ಕೋರಿದೆ.
ಈ ಮೀಸಲು ನಿಧಿಯನ್ನು ಸರಕಾರ ಮತ್ತು ಆರ್ ಬಿಐ ಜಂಟಿಯಾಗಿ ನಿರ್ವಹಿಸಬಹುದು ಎಂಬುದು ಸರಕಾರದ ವಾದವಾಗಿದೆ. ಆದರೆ ಸರಕಾರದ ಈ ಪ್ರಸ್ತಾವನೆ ಒಪ್ಪಿಕೊಂಡಿದ್ದೇ ಆದಲ್ಲಿ ಅದು ದೇಶದ ಆರ್ಥಿಕ ಸುಸ್ಥಿರತೆಗೆ ಗಂಭೀರ ಪರಿಣಾಮವುಂಟು ಮಾಡಬಹುದು ಎಂದು ಆರ್ ಬಿಐ ತಿಳಿದುಕೊಂಡಿದೆಯೆನ್ನಲಾಗಿದ್ದು, ಇದೇ ಕಾರಣದಿಂದ ಅದು ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.