ಫುತ್ತೂರು:ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ),ಯಕ್ಷಕಲಾ ಕೇಂದ್ರ ಮತ್ತು ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಂಗೀತ ದಿನದ ಪ್ರಯುಕ್ತ “ಫಿಲೋ ನಿನಾದ” ಕಾರ್ಯಕ್ರಮವನ್ನು ಮಂಗಳವಾರದAದು ಪಿ.ಜಿ ಸೆಮಿನಾರ್ ಹಾಲ್ ನಲ್ಲಿ ಸಂಯೋಜಿಸಲಾಯಿತು.ಸAಗೀತದ ರಸಾನುಭೂತಿಯನ್ನುಸೃಷ್ಟಿಸುವ ಅಪೂರ್ವ ಪ್ರಸ್ತುತಿಯನ್ನು ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿ ಕಲಾವಿದರು ನಡೆಸಿಕೊಟ್ಟರು.
ಫಿಲೋ ನಿನಾದದ ಅತಿಥಿಗಳಾಗಿ ತಬಲಾ ವಾದಕ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಮನ್ ದೇವಾಡಿಗ ಹಾಗೂ ಕೊಳಲು ವಾದಕ ಕೃಷ್ಣ ಗೋಪಾಲ್ ರವರು ಭಾಗವಹಿಸಿದರು.
ಸುಮನ್ ದೇವಾಡಿಗರವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಭೆಯನ್ನು ಬೆಳಗಿಸಲು ಸಂತಫಿಲೋಮಿನಾ ಕಾಲೇಜು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು.ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ರೆ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಸಂಗೀತವು ಮನಸ್ಸಿಗೆ ಧನಾತ್ಮಕ ಪ್ರೇರಣೆಯನ್ನು ನೀಡುತ್ತದೆ.ಸಂಗೀತದಿAದ ವಿಶೇಷ ಅನುಭೂತಿಯನ್ನುಪಡೆಯಲು ಸಾಧ್ಯವೆಂದು ತಿಳಿಸಿದರು.ಲಲಿತ ಕಲೆಗಳಲ್ಲಿ ಅಭಿರುಚಿಯನ್ನು ಮೂಡಿಸುವ ಪ್ರಯತ್ನ ಮಾಡುವಂತೆಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಡಾ|ವಿಜಯಕುಮಾರ್ ಮೊಳೆಯಾರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಕಲಾವಿದರಿಂದ “ಫಿಲೋ ನಿನಾದ” ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಯಕ್ಷಕಲಾ ಕೇಂದ್ರ ನಿರ್ದೇಶಕ ಪ್ರಶಾಂತ ರೈ ಮುಂಡಾಳಗುತ್ತು ರಚಿಸಿ,ರಾಗ ಸಂಯೋಜಿಸಿದ ಹಾಡುಗಳ ಪ್ರಸ್ತುತಿ ಅಪೂರ್ವವಾಗಿ ಸಂಪನ್ನಗೊAಡಿತು.ತಬಲಾದಲ್ಲಿ ಸುಮನ್ ದೇವಾಡಿಗ ಮತ್ತು ಕೊಳಲಿನಲ್ಲಿ ಕೃಷ್ಣಗೋಪಾಲ್‌ಸಹಕರಿಸಿದರು.
ಯಕ್ಷಕಲಾ ಕೇಂದ್ರ ವಿದ್ಯಾರ್ಥಿನಿ ಶ್ರದ್ಧಾ ಭಟ್ ಪ್ರಾರ್ಥಿಸಿದರು.ಶ್ರೀ ಪ್ರಶಾಂತ ರೈ ಮುಂಡಾಳಗುತ್ತು ಸ್ವಾಗತಿಸಿ ಪ್ರಸ್ತಾವನಿಗೈದರು.ಲಲಿತಕಲಾ ವಿದ್ಯಾರ್ಥಿನಿ ಶ್ರೀದೇವಿ ಭಟ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.