ಪುತ್ತೂರು:ನಿರ್ವಹಣಾ ತಂಡದಿAದ ಪ್ರಾತ್ಯಕ್ಷಿಕೆ “ಪಕೃತಿ ವಿಕೋಪ ಸೇರಿದಂತೆ ಇತರೆ ಯಾವುದೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಎನ್.ಡಿ.ಆರ್. ಎಫ್. ಜನರ ಜೀವ ಉಳಿಸುವ ಮಹತ್ವದ ಕಾರ್ಯ ಮಾಡುತ್ತದೆ.
ಈ ಸಂದರ್ಭಗಳಲ್ಲಿ ಆಗುವ ಜೀವಹಾನಿಯನ್ನು ಕಡಿಮೆ ಮಾಡಲು ಯೋಜಿತ ರೀತಿಯಲ್ಲಿ ತುರ್ತುಸ್ಥಿತಿಯ ಅರ್ಥದಲ್ಲಿ ವಿಪತ್ತುಗಳಿಗೆ ಪ್ರತಿಕ್ರಿಯಿಸಲು ಈ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಯೋಜಿಸಿದೆ.” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಟೀಮ್ ಕಮಾಂಡರ್ ಶಾಂತಿಲಾಲ್ ಜಾಟಿಯಾ ಇವರು ಹೇಳಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರು ಹೇಗೆ ತಮ್ಮನ್ನು ತಾವು ರಕ್ಷಣೆ ಮಾಡಬೇಕು ಎಂಬುದರ ಕುರಿತು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೊತೆಗೆ ಅಪಘಾತವಾದಾಗ,ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು,ಒಬ್ಬ ವ್ಯಕ್ತಿಯ ಕೈ,ಕಾಲಿಗೆ ಮತ್ತು ಭುಜಕ್ಕೆ ಪೆಟ್ಟು ಬಿದ್ದು ಮುರಿದಾಗ ಮಾಡಬಹುದಾದ ಚಿಕಿತ್ಸೆ,ಭೂಕಂಪದ ಮತ್ತು ಪ್ರವಾಹದ ಸಂದರ್ಭದಲ್ಲಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಬಹುದು ಎಂಬುದರ ವಿವರಣೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ದೇವರಾಜ್ ಇಕ್ಕೇರಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಅರ್ಜುನ್, ಅಶೋಕ್, ಎಲ್ಲಪ್ಪಾ, ಸಾಮಿ, ಬಾಲಕೃಷ್ಣ, ಚಿನ್ನಾ ಕದ್ರಿ, ಜಾಕ್ಲಿನ್ ವಿನು ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಿಂಚನಾ ಕೆ.ಎಸ್. ಸ್ವಾಗತಿಸಿ,ವಂದಿಸಿದರು.