Friday, October 4, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕು|ಸಿಯಾ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದು ಎಸ್ ಜಿ ಎಫ್ ಐ ಮೀಟ್ ಗೆ ಆಯ್ಕೆ –ಕಹಳೆ ನ್ಯೂಸ್

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ನಗರ ಪಾಲಿಕೆ ಪರಿಷದ್, ಪಂಡಿತ್ ದೀನ್ ದಯಾಳ್ ತರಂತಾಲ್ ನಲ್ಲಿ ಸೆಪ್ಟೆಂಬರ್ 02 ಮತ್ತು 03 ರಂದು ನಡೆದ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಿ. ಬಿ. ಎಸ್.ಸಿ ನ 9ನೇ ತರಗತಿ ವಿದ್ಯಾರ್ಥಿನಿಯಾದ ಕು|ಸಿಯಾ ಭಾವಿನ್ ಸವಜಾನಿ ಇವರು, 200 ಮೀಟರ್ ಫ್ರೀ ಸ್ಟೈಲ್ ಮತ್ತು 4್ಠ100 ಮೆಡ್ಲೆಯ್ ರಿಲೇ, 4್ಠ100 ರಿಲೇ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅAತೆಯೇ, 100ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾಜಕೋಟ್ ನಲ್ಲಿ ನಡೆಯುವ ಎಸ್ ಜಿ ಐ ಎಫ್ ಮೀಟ್ ಗೆ ಆಯ್ಕೆಯಾಗಿರುತ್ತಾರೆ.

ಇವರು, ಪುತ್ತೂರಿನ ಬಾಲವನದ ಈಜು ತರಬೇತಿದಾರರಾದ; ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್ ಇವರಿಂದ ಸುಮಾರು 10ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪ್ರಸ್ತುತ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ವಾಸವಾಗಿರುವ ಹಾಗೂ ಕೋಡಿಂಬಾಡಿಯ ‘ಕೃಷ್ಣಕೃಪಾ’ ಅಡಿಕೆ ಖರೀದಿ ಮತ್ತು ಸಂಸ್ಕರಣಾ ಉದ್ಯಮದ ಮಾಲೀಕರಾದ ಭಾವಿನ್ ಅಶೋಕ್ ಭಾಯಿ ಸವಜಾನಿ ಮತ್ತು ಸಹನಾ ಭಾವಿನ್ ಸವಜಾನಿ ದಂಪತಿ ಸುಪುತ್ರಿ.

ಜಾಹೀರಾತು
ಜಾಹೀರಾತು