Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ಪದವಿ ವಿಭಾಗದಿಂದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕ್ರೀಡಾ ಸಂಘ ವತಿಯಿಂದ ಮಂಗಳೂರಿನ ತಣ್ಣೀರು ಬಾವಿಯಲ್ಲಿ ನಡೆದ ಬೀಚ್ ಫೆಸ್ಟ್ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರೀರಾಮ ಪದವಿ ವಿಭಾಗದಿಂದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕ್ರೀಡಾ ಸಂಘ ಆಯೋಜಿತ ಬೀಚ್ ಫೆಸ್ಟ್ ಕಾರ್ಯಕ್ರಮವು ಮಂಗಳೂರಿನ ತಣ್ಣೀರು ಬಾವಿಯಲ್ಲಿ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮಕ್ಕೆ ಶುಭಹಾರೈಕೆ ಮಾಡುತ್ತ ಸಮುದ್ರಕ್ಕೆ ಕ್ಷೀರಾಭಿಷೇಕ ಮಾಡಿ ವಾಲಿಬಾಲ್ ಚೆಂಡನ್ನು ಹಾರಿಸಿ ಪ್ರತಾಪ ಕ್ರೀಡಾ ಸಂಘದ ಉದ್ಘಾಟನೆ ಮಾಡಿದರು, ಬಳಿಕ ಅರವಿಂದ್ ಬೆಂಗ್ರೇ ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ವೇಳೆ ಹಲವು ಜನರನ್ನು ನೀರಿನಿಂದ ರಕ್ಷಿಸಿದ ಸಾಹಸಿಯಾದ ಅನೀಶ್‍ರವರು ಸಮುದ್ರ ಸಾಹಸಿ ಪ್ರದರ್ಶನವನ್ನು ನೀಡಿದರು. ಬಿ.ಎ ವಿಭಾಗದ ಮುಖ್ಯಸ್ತರಾದ ಶ್ರೀಮತಿ ಜಯಲಕ್ಷ್ಮಿ ಮಾತಾಜಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಬಳಿಕ 17-09-2024 ರಿಂದ 03-10-2024 ರವರೆಗೆ ಸ್ವಚ್ಛತಾ ಹೀ ಸೇವಾ 2024 ರ ವರೆಗಿನ ಕಾರ್ಯಕ್ರಮವು ಸಮುದ್ರ ತೀರವನ್ನು ಕಸ ಹೆಕ್ಕಿ ಶುಚಿಗೊಳಿಸುವ ಮೂಲಕ ತೆರೆಕಂಡಿತು. ಬಳಿಕ ಮರಳು ಶಿಲ್ಪ, ವಾಲಿಬಾಲ್, ಥ್ರೋ ಬಾಲ್, ಓಟಗಳು ಮುಂತಾದ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು