Sunday, January 19, 2025
ಬದಿಯಡ್ಕಸುದ್ದಿ

2025 ಮಾ.1ರಿಂದ 9ರ ತನಕ ಕಾರ್ಮಾರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ : ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ  ನಡೆದ  ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ : ಆರಾಧನಾಲಯಗಳು ನಾಡಿನ ಶಕ್ತಿಯ ದ್ಯೋತಕ – ಎಡನೀರು ಶ್ರೀ- ಕಹಳೆ ನ್ಯೂಸ್

ಬದಿಯಡ್ಕ: ಆರಾಧನಾಲಯಗಳು ನಾಡಿನ ಶಕ್ತಿ ಧ್ಯೋತಕಗಳಾಗಿವೆ. ದೇವಾಲಯಗಳ ಪುನರುಜ್ಜೀವನ ಜನಜೀವನವನ್ನು ಆಧ್ಯಾತ್ಮಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಸದೃಢಗೊಳಿಸುವುದರೊಂದಿಗೆ ಶ್ರೇಯಸ್ಸನ್ನು ತರುತ್ತದೆ. ಜನರ ಶ್ರದ್ಧೆ, ಆಸಕ್ತಿಗಳಿಂದ ಜೀರ್ಣೋದ್ಧಾರ ಯಶಸ್ವಿಯಾಗುತ್ತದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.

ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು. ಅತಿಶೀಘ್ರದಲ್ಲಿ ಶ್ರೀದೇವರ ಬ್ರಹ್ಮಕಲಶೋತ್ಸವವನ್ನು ನಡೆಸಿ ದೇವರನ್ನು ಮೂಲಾಲಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ಊರಿನ ಜನರ ಮನಸ್ಥಿತಿಯ ಫಲವಾಗಿ ಶ್ರೀಕ್ಷೇತ್ರವು ಸುಂದರವಾಗಿ ರೂಪುಗೊಳ್ಳುತ್ತಿದೆ ಎಂದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಉದ್ಯಮಿ ಮಧುಸೂದನ ಆಯರ್ ಮಂಗಳೂರು, ಮಲಬಾರ್ ದೇವಸ್ವಮ್ ಬೋರ್ಡ್ ಎಸಿ ಮೆಂಬರ್ ಶಂಕರ ರೈ ಮಾಸ್ತರ್, ಡಾ ನರೇಶ್ ರೈ ದೆಪ್ಪುಣಿಗುತ್ತು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನರಸಿಂಹ ಭಟ್ ಕಾರ್ಮಾರು, ಶ್ರೀಕೃಷ್ಣ ಭಟ್ ಪುದುಕೋಳಿ, ಗಣಾಧಿರಾಜ ತಂತ್ರಿ ಕೊಲ್ಲಂಗಾನ, ಕೃಷ್ಣಮೂರ್ತಿ ಪುದುಕೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹೇಶ್ ವಳಕ್ಕುಂಜ ಸ್ವಾಗತಿಸಿ, ವಿಜಯಕುಮಾರ್ ಮಾನ್ಯ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು