Recent Posts

Monday, January 20, 2025
ಸುದ್ದಿ

ರಾತ್ರಿ 8ರಿಂದ 10ರ ಹೊರತು ಇತರೆ ವೇಳೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ – ಕಹಳೆ ನ್ಯೂಸ್

ದೀಪಾವಳಿ ಸಮಯದಲ್ಲಿ ಪಟಾಕಿ, ಸುಡುಮದ್ದುಗಳ ಬಳಕೆಗೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಆದೇಶವನ್ನು ರಾಜ್ಯ ಪೋಲೀಸರು ಕಟ್ಟುನಿಟ್ಟಾಗಿ ಪಾಲನೆಗೆ ತರಲು ಮುಂದಾಗಿದ್ದಾರೆ.

ರಾತ್ರಿ 8ರಿಂದ 10ರ ಹೊರತು ಇತರೆ ವೇಳೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಇಲಾಖೆ ಎಚ್ಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರಾದರೂ ನಿಗದಿತ ಸಮಯದ ಹೊರತಾಗಿ ಪಟಾಕಿಗಳನ್ನು ಹಚ್ಚಿದ್ದು ಕಂಡುಬಂದರೆ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೂರು ಪಡೆದು ಸ್ಥಳಕ್ಕೆ ಆಗಮಿಸುವ ಪೋಲೀಸರು ಪರಿಸ್ಥಿತಿ ಅವಲೋಕಿಸುತ್ತಾರೆ. ಪಟಾಕಿ ಹಚ್ಚುವವರು ಅಪ್ರಾಪ್ತನಾಗಿದ್ದರೆ, ಅಪ್ರಾಪ್ತನೊಡನೆ ಇನ್ನೊಬ್ಬ ವ್ಯಕ್ತಿ ವಯಸ್ಕನಿದ್ದಲ್ಲಿ ಆ ವಯಸ್ಕ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಅಂತ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.