ವಿನಯ್ ಕುಲಕರ್ಣಿಗೆ ಮಹಿಳೆಯಿಂದ ಕಂಟಕ, ಲೈಂಗಿಕ ಕಿರುಕುಳದ ಆರೋಪ : ನಿಜವಾಯ್ತು ತುಳುನಾಡಿನ ಆರಾಧ್ಯದೈವ ಕೊರಗಜ್ಜನ ಸೂಚನೆ! – ಕಹಳೆ ನ್ಯೂಸ್
3 ವರ್ಷ ಸೂಕ್ಷ್ಮವಾಗಿ ಇರುವಂತೆ ವಿನಯ್ ಕುಲಕರ್ಣಿಗೆ ಕೊರಗಜ್ಜ ದೈವ ಈ ಹಿಂದೆ ಸೂಚನೆ ನೀಡಿದ್ದು, ಹೆಣ್ಣಿನ ವಿಚಾರವಾಗಿಯೇ ದೈವ ನುಡಿದಿತ್ತಾ ಎಂಬ ಚರ್ಚೆ ಇದೀಗ ಆರಂಭವಾಗಿದೆ. ಕೊರಗಜ್ಜನ ಆ ದೈವ ನುಡಿ ನಿಜವಾಯ್ತಾ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ.
ಕಳೆದ ಜುಲೈನಲ್ಲಿ ವಿಧಾನಸಭಾ ಚುನಾವಣೆಯ ಗೆಲುವಿನ ಹಿನ್ನೆಲೆ ತುಳುನಾಡಿನ ಆರಾಧ್ಯದೈವ ಕೊರಗಜ್ಜನಿಗೆ ಹರಕೆಯ ಕೋಲ ಸೇವೆ ಸಲ್ಲಿಸಲು ಮಂಗಳೂರಿಗೆ ವಿನಯ್ ಆಗಮಿಸಿದ್ದರು. ಮೂರು ವರ್ಷ ತೀರಾ ಸೂಕ್ಷ್ಮವಾಗಿ ಇರಬೇಕು. ಅಧರ್ಮದಲ್ಲಿ ಹೋದವರನ್ನ ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ ಎಂದು ದೈವ ಸೂಚನೆ ನೀಡಿತ್ತು. ಆ ನುಡಿ, ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಈಗ ವಿನಯ್ ಕುಲಕರ್ಣಿಗೆ ಎದುರಾದಂತಿದೆ ಎಂದು ಹೇಳಲಾಗುತ್ತಿದೆ.
ಈಗ ಆರೋಪ ಮಾಡುತ್ತಿರುವ ಮಹಿಳೆಯ ಬಗ್ಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, ನಾನು ಆಕೆಯನ್ನು ಟಚ್ ಕೂಡ ಮಾಡಿಲ್ಲ. ನಾನು ಆ ಮಹಿಳೆಯನ್ನು ಟಚ್ ಮಾಡಿದ್ರೆ, ನನ್ನ ತಾಯಿಗೆ ಟಚ್ ಮಾಡಿದಂತೆ. ಇದೆಲ್ಲಾ ನನ್ನ ವಿರುದ್ಧ ಷಡ್ಯಂತ್ರ ಮಾತ್ರ. ಆಕೆ ರೈತ ಸಂಘದ ಮುಖಂಡೆ. ಸಹಾಯ ಕೇಳಿ ಬಂದಾಗ ಹೆಲ್ಪ್ ಮಾಡುತ್ತಿದ್ದೆ. ಜಸ್ಟ್ ಒಂದೆರಡು ಸಲ ವಿಡಿಯೋ ಕಾಲ್ ಮಾಡಿದ್ದೆ. ಆಗಾಗ ಅವಳೆ ಹಾರ್ಟ್ ಎಮೋಜಿ ಕಳುಹಿಸುತ್ತಿದ್ದಳು. ಅದನ್ನೇ ಇಟ್ಟುಕೊಂಡು ನನ್ನನ್ನು ಬೆದರಿಸುತ್ತಿದ್ದಾರೆ. ನಾನೂ ಸಹ ಈ ಬಗ್ಗೆ ದೂರು ನೀಡಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.