ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ – ಕಹಳೆನ್ಯೂಸ್
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎರಡನೇ ಪತ್ನಿ ಗ್ರೇಷಿಯಾ ಮುನೋಜ್ ಜೊತೆ ಸೇರಿ ಡೆಲಿವರಿ ಬಾಯ್ನಂತೆ ಏಂಬಿಯನ್ಸ್ ಮಾಲ್ಗೆ ಹೋಗಿದ್ದರು. ಅಲ್ಲಿ ಹಲ್ದೀರಾಮ್ ಸ್ಟೋರ್ನಿಂದ ಆರ್ಡರ್ ಕಲೆಕ್ಟ್ ಮಾಡಲು ಲಿಫ್ಟ್ ಅಥವಾ ಎಲಿವೇಟರ್ ಬಳಸಲು ಹೋಗುತ್ತಾರೆ. ಅಲ್ಲಿದ್ದ ಸೆಕ್ಯೂರಿಟಿಯವರು ತಡೆದು, ಮೆಟ್ಟಿಲುಗಳ ಮೂಲಕ ಹೋಗುವಂತೆ ಸೂಚಿಸುತ್ತಾರೆ.
ದೀಪಿಂದರ್ ಗೋಯಲ್ ಸ್ಟೇರ್ ಕೇಸ್ ಬಳಸಿ ಹಲ್ದೀರಾಮ್ಸ್ ಇದ್ದ 3ನೇ ಫ್ಲೋರ್ಗೆ ಹೋಗುತ್ತಾರೆ. ಡೆಲಿವರಿ ಹುಡುಗರು ಸ್ಟೇರ್ಕೇಸ್ಗೆ ಮಾತ್ರ ಸೀಮಿತ ಇರಬೇಕು. ಮಾಲ್ನೊಳಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಜೊಮಾಟೊ ಸಿಇಒಗೆ ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸ್ಟೇರ್ಕೇಸ್ನಲ್ಲಿ ಕೂತು ಇತರ ಡೆಲಿವರಿ ಬಾಯ್ಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.
ಮಾಲ್ಗಳೊಂದಿಗೆ ಮಾತನಾಡಬೇಕು ಎಂದ ಸಿಇಒ
ಎಲ್ಲಾ ಡೆಲಿವರಿ ಪಾರ್ಟ್ನರ್ಗಳ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮಾಲ್ಗಳ ಜೊತೆ ನಿಕಟವಾಗಿ ಕೆಲಸ ಮಾಡುವ ಅಗತ್ಯತೆ ಇರುವುದು ಅರಿವಿಗೆ ಬಂತು. ಡೆಲಿವರಿ ಪಾರ್ಟ್ನರ್ಸ್ ವಿಚಾರದಲ್ಲಿ ಮಾಲ್ಗಳೂ ಕೂಡ ಹೆಚ್ಚು ಮಾನವೀಯ ಕಾಳಜಿ ತೋರಬೇಕು ಎಂದು ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಬರೆದಿದ್ದಾರೆ.
ಜೊಮಾಟೊ ಸಿಇಒ ಅವರ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸಿಇಒವೊಬ್ಬರು ಡೆಲಿವರಿ ಬಾಯ್ನಂತೆ ಕೆಲಸ ಮಾಡಿರುವುದಕ್ಕೆ ಬಹಳಷ್ಟು ಜನರು ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ಇದು ಬರೀ ಪಿಆರ್ ಸ್ಟಂಟ್ ಮಾತ್ರವೇ. ಡೆಲಿವರಿ ಬಾಯ್ಗಳ ಬಗ್ಗೆ ಇವರಿಗೇನೂ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.