Sunday, January 19, 2025
ಸುದ್ದಿ

399 ರೂ.ರಿಚಾರ್ಜ್ ಮಾಡಿಸಿದರೆ 100% ಕ್ಯಾಶ್ ಬ್ಯಾಕ್: ಜಿಯೋ ದೀಪಾವಳಿ ಬಂಪರ್ ಆಫರ್.

ಉಚಿತ ಕೊಡುಗೆಗಳ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ರಿಲಾಯನ್ಸ್ ಒಡೆತನದ ಜಿಯೊ ಈ ಬಾರಿಯ ದೀಪಾವಳಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ.ಕ್ಟೋಬರ್ 12ರಿಂದ 18ರವರೆಗೆ 399ರೂ.ಗೆ ರೀಚಾರ್ಜ್ ಮಾಡಿಸಿದರೆ ಶೇ.100ರಷ್ಟು ಹಣ ವಾಪಸ್ ದೊರೆಯಲಿದೆ.

ದೀವಾಳಿ ಧನ್ ಧನಾ ಧನ್ ಹೆಸರಿನಲ್ಲಿ ಹೊಸ ಕೊಡುಗೆ ಪ್ರಕಟಿಸಲಾಗಿದ್ದು, 399 ರೂ. ರಿಚಾರ್ಜ್ ಮಾಡಿಸಿದರೆ ತಲಾ 50ರೂ. ನಂತೆ 8 ಬಾರಿ ಕ್ಯಾಶ್ ಬ್ಯಾಕ್ ಪಡೆಯಬಹುದು. ತಲಾ 50 ರೂ.ನ 8 ವೋಚರ್ ಅಂದರೆ 400ರೂ. ನೀಡಲಾಗುತ್ತದೆ. ಈ ವೋಚರ್ ಗಳನ್ನು ಮುಂದಿನ ಅಂದರೆ 309ರೂ. ಮೇಲ್ಪಟ್ಟ ಆಫರ್ ಅಥವಾ 91 ರೂ. ಮೇಲ್ಪಟ್ಟ ಡಾಟಾ ಆಫರ್ ಗಳಿಗೆ ಈ ವೋಚರ್ ಬಳಸಿಕೊಳ್ಳಬಹುದು. ಈ ವೋಚರ್ ಗಳನ್ನು ನವೆಂಬರ್ 15ರ ನಂತರ ಮಾತ್ರವೇ ಬಳಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

399ರೂ. ಯೋಜನೆಯು ಪ್ರೀಪೇಯ್ಡ್ ಗ್ರಾಹಕರಿಗೆ ಅನ್ವಯವಾಗಲಿದ್ದು, ದಿನಕ್ಕೆ ತಲಾ 1 ಜಿಬಿ ಡಾಟಾದಂತೆ 84 ದಿನಗಳ ಕಾಲಾವಧಿಯದ್ದಾಗಿರುತ್ತದೆ. ಕ್ಯಾಶ್ ಬ್ಯಾಕ್ ಆಫರ್ ಅಕ್ಟೋಬರ್ 18ಕ್ಕೆ ಕೊನೆಗೊಳ್ಳಲಿದ್ದು, ಒಂದು ದಿನಕ್ಕೆ ವಿಸ್ತರಿಸುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ರಿಲಾಯನ್ಸ್ ಅಂಗಡಿಗಳಿಗೆ ಭೇಟಿ ನೀಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response