Thursday, November 14, 2024
ಸುದ್ದಿ

ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷಕಲಾ ಕೇಂದ್ರ” ಮತ್ತು ದೇಶಭಕ್ತ ಎನ್ ಎಸ್ ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ-ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷಕಲಾ ಕೇಂದ್ರ” ಮತ್ತು ದೇಶಭಕ್ತ ಎನ್ ಎಸ್ ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕೆದಂಬಾಡಿ ಸನ್ಯಾಸಿ ಗುಡ್ಡೆಯ ಸದ್ಗುರು ಗೋಪಾಲನ್ ನಾಯರ್ ಸಭಾಭವನದಲ್ಲಿ ಸಂಪನ್ನಗೊಂಡಿತು.

ಯಕ್ಷಕಲಾ ಕೇಂದ್ರ ಮತ್ತು ಎನ್ ಎಸ್ ಕಿಲ್ಲೆ ಪ್ರತಿಷ್ಠಾನವು ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆಯಂತೆ ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ, ದತ್ತು ಗ್ರಾಮ ಕೆದಂಬಾಡಿಯಲ್ಲಿ ವೈಭವದಿಂದ ಜರಗಿತು. ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರಸಂಗವನ್ನು ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಕಲಾ ಕೇಂದ್ರದ ನಿರ್ದೇಶಕರು ಮತ್ತು ಉಪನ್ಯಾಸಕರಾದ ಪ್ರಶಾಂತ್ ರೈ ,ಮುಂಡಾಳಗುತ್ತುರವರು ಸಾಂಸ್ಕೃತಿಕ ವಿಸ್ತರಣೆ ಚಟುವಟಿಕೆಗಳ ಮಾಹಿತಿ ನೀಡಿದರು.ಉಪಪ್ರಾಂಶುಪಾಲರಾದ ಡಾ.ವಿಜಯ ಕುಮಾರ್ ಮೊಳೆಯಾರರವರು, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಕಿಲ್ಲೆ ಪ್ರತಿಷ್ಠಾನದೊಂದಿಗೆ ತಿಳುವಳಿಕೆ ಜ್ಞಾಪಕ ಪತ್ರ ಒಡಂಬಡಿಕೆ ಮಾಡಿಕೊಂಡಿದೆ. ಪ್ರಾಂಶುಪಾಲರಾದ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೋ ರವರು ಸಾಹಿತ್ಯ ಮತ್ತು ಸಂಸ್ಕೃತಿಯ ವಿಸ್ತರಣೆಗೆ ವಿಶೇಷ ಪ್ರಾತಿನಿಧ್ಯವನ್ನು ನೀಡುತ್ತಿದ್ದು ,ಸಾಮಾಜಿಕ ಔನ್ನತ್ಯಕ್ಕೆ ಹೇತುವಾದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಲು ಸರ್ವರೂ ಸಹಕರಿಸುವಂತೆ ವಿನಂತಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ಪ್ರದರ್ಶನದ ಪ್ರಾಯೋಜಕತ್ವವನ್ನು ನಿವೃತ್ತ ಶಿಕ್ಷಕರಾದ ಮುಂಡಾಳಗುತ್ತು ಈಶ್ವರ ಆಳ್ವ ಸ್ಮರಣಾರ್ಥ ಅವರ ಕುಟುಂಬಿಕರು ನೀಡಿದರು.
ವೇದಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಿಮ್ಮೇಳ ವಾದಕರಾದ ಪದ್ಯಾಣ ಶಂಕರ ನಾರಾಯಣ ಭಟ್ಟ, ಪದ್ಯಾಣ ಜಯರಾಮ ಭಟ್ಟ , ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಜಯಶಂಕರ ರೈ ಬೆದ್ರುಮಾರ್, ಪದಾಧಿಕಾರಿಗಳಾದ ಮೋಹನ ಆಳ್ವ ಮುಂಡಾಳಗುತ್ತು, ಸಂತೋಷ್ ಕುಮಾರ್ ರೈ ಕೋರಂಗ, ಕರುಣಾಕರ ರೈ ಕೋರಂಗ,ಸುರೇಶ್ ರೈ ಮುಂಡಾಳಗುತ್ತು,ವಿಜಯಕುಮಾರ್ ರೈ ಕೋರಂಗ,ಕೈಲಾಸ್ ಕೆದಂಬಾಡಿ,ರಾಘವ ಗೌಡ
ಕೆರೆಮೂಲೆ ಉಪಸ್ಥಿತರಿದ್ದರು.