Friday, April 11, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ : ಶ್ರೀಶಾರದಾ ಭಜನಾ ಮಂದಿರ ವೀರಕಂಭದಲ್ಲ 40ನೇ ವರ್ಷದ ಶ್ರೀ ಶಾರದಾ ಮಹೋತ್ಸವ- ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರ ವಿರ ಕಂಬದಲ್ಲಿ 40ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.3ರಿಂದ ಆರಂಭಗೊಂಡಿದ್ದು, ಅ.13 ನೇ ತಾರೀಖಿನ ತನಕ ನಡೆಯಲಿದೆ.

ಅ. 11ರ ಬೆಳಿಗ್ಗೆ ಗಣಹೋಮದ ನಂತರ ಶ್ರೀ ಶಾರದ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಲಿದ್ದು, ರಾತ್ರಿ 8 ಗಂಟೆ ತನಕ ಅರ್ಥ ಏಕಹ ಭಜನಾ ಕಾರ್ಯಕ್ರಮ ನೆರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅ.12ರ ಸಂಜೆ 5 ಗಂಟೆಗೆ ದುರ್ಗನಮಸ್ಕಾರ ಪೂಜೆ, ರಾತ್ರಿ 8 ಗಂಟೆಗೆ ಸರಿಯಾಗಿ ಸಾರ್ವಜನಿಕ ಅನ್ನದಾನದ ಬಳಿಕ ಉಸ್ತವ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಲಿರುವರು , ಧಾರ್ಮಿಕ ಉಪನ್ಯಾಸವನ್ನು ರಾಧಾಕೃಷ್ಣ ಏರುoಬು ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಅಗ್ರಜ ಬಿಲ್ಡರ್ಸ್ ಮಾಲಕರಾದ ಸಂದೇಶ್ ಕುಮಾರ್ ಶೆಟ್ಟಿ ಅರಬೆಟ್ಟು ಭಾಗವಹಿಸಲಿದ್ದಾರೆ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅ.13-ರ ಮಧ್ಯಾಹ್ನ ರಂಗಪೂಜೆ, ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಸಂಜೆ ಗಂಟೆ 4ಕ್ಕೆ ಸರಿಯಾಗಿ ವಿಸರ್ಜನಾ ಪೂಜೆ ನಡೆದು ನಂತರ ಶ್ರೀ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ನೆರವೇರಲಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ