Recent Posts

Tuesday, January 21, 2025
ಬೆಂಗಳೂರು

‘ಬಿಗ್‍ಬಾಸ್ ಸೀಸನ್ 11 : ದೊಡ್ಮನೆಯ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಮಾಜಿ ಸ್ಪರ್ಧಿ ಯಮುನಾ..! – ಕಹಳೆ ನ್ಯೂಸ್

ಬಿಗ್ ಬಾಸ್ ಸೀಸನ್ 11ರಲ್ಲಿ ಮೊದಲನೇ ಸ್ಪರ್ಧಿಯಾಗಿ ಯಮುನಾ ಶ್ರೀನಿಧಿ ಔಟ್ ಆಗಿರೋದು ಗೊತ್ತೇ ಇದೆ. ಸಾಕಷ್ಟು ಜನ ಇಷ್ಟು ಬೇಗ ಯಮುನಾ ಬರ್ತಿರೋದು ನಂಬೋಕೆ ಆಗ್ತಿಲ್ಲ ಎಂದೇ ಕಮೆಂಟ್ ಮಾಡುತ್ತಿದ್ದಾರೆ. ಮನೆಯೊಳಗೆ ಇದ್ದಾಗ ಯಮುನಾ ಅವರು ರಗಡ್ ಆಗಿಯೇ ಆಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗದೀಶ್ ಹಾಗೂ ಉಗ್ರಂ ಮಂಜು ಜತೆಗೆ ಸಾಕಷ್ಟು ಬಾರಿ ಗಲಾಟೆ ಕೂಡ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಮನೆಯ ಬಗ್ಗೆ ಹಲವಾರು ವಿಚಾರಗಳನ್ನು ಶೇರ್ ಮಾಡಿಕೊಂಡಿರುವ ಯಮುನಾ ಅವರಿಗೆ ಯಾರು ರಿಯಲ್? ಯಾರು ಫೇಕ್? ಎಂಬ ಪ್ರಶ್ನೆ ಬಂದಾಗ ಹೇಳಿದ್ದು ಹೀಗೆ. ಅಲ್ಲಿ ಬರೀ ಒಂದು ವಾರ ಆದಂತಹ ಅನುಭವಗಳಲ್ಲಿ 90% ಫೇಕ್ ಅನ್ನುತ್ತೀನಿ.. ಸೀದಾ ಇರೋಕೆ ಚಾನ್ಸ್ ಇಲ್ಲ ಅನ್ನಿಸಿತ್ತೆ. ಇನ್ನು ಡಿಸಿಪ್ಲಿನ್ ನಾನು ಮುಂಚೆನೇ ಇದ್ದೆ. ರಿಯಾಲಿಟಿ ಶೋ, ಶೂಟಿಂಗ್ ಅಲ್ಲಿಯೂ ನಾನು ಡಿಸಿಲ್ಲಿನ್ ಆಗಿರುತ್ತದೆ. ಆರನೇ ದಿನ ಮುಗಿಸೋ ಅಷ್ಟರಲ್ಲಿ ಎಲ್ಲರ ಮುಖವಾಡ ಗೊತ್ತಾಯ್ತು. ಯಾರನ್ನು ನಂಬೋಕೆ ಸಾಧ್ಯವಿಲ್ಲ. ಇನ್ನು ನಾನು ಆಟ ಶುರು ಮಾಡಿಲ್ಲ. ಧರ್ಮ ಕೀರ್ತಿ ಮಾತ್ರ ಅವರಾಗೇ ಇದ್ದರು. ಕೊನೆ ತನಕ ಹಾಗೇ ಇದ್ದರು ಎಂದು ಹೇಳಿದರು.

ಬಿಗ್ ಬಾಸ್ ಮನೆ ಈಗ ರಣರಂಗವಾಗಿದೆ. ಬಿಗ್ ಬಾಸ್ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮಾತ್ರವಲ್ಲ ಯಮುನಾ ಅವರು ಮನೆಯಿಂದ ಆಚೆ ಹೋದ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇನ್ನು ವೀಕ್ಷಕರು ಕೂಡ ಯಮುನಾ ಇಷ್ಟು ಬೇಗ ಹೋಗೋ ಸ್ಪರ್ಧಿ ಅಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಆಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.