Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ LEEE ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: LEEE ಸಂಸ್ಥೆಯು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು, ಪದವಿಪೂರ್ವ, ಪದವಿ ಮತ್ತು ಮುಂದುವರಿದ ವೃತ್ತಿಪರ ಶಿಕ್ಷಣಕ್ಕಾಗಿ ಪೂರಕ ಸಂಪನ್ಮೂಲಗಳನ್ನು ಒದಗಿಸುತ್ತದೆ.

ಇದು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ LEEE ವಿದ್ಯಾರ್ಥಿ ವಿಭಾಗ, LEEE ಮಂಗಳೂರು ಉಪ ವಿಭಾಗ ಹಾಗೂ ವುಮನ್ ಇನ್ ಇಂಜಿನಿಯರಿಂಗ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ LEEE ದಿನಾಚರಣೆಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.LEEE ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೂತನ ತಂತ್ರಜ್ಞಾನಗಳನ್ನು ಕಲಿಯುವುದರ ಜತೆಯಲ್ಲಿ ಆತ್ಮವಿಶ್ವಾಸವನ್ನು ವೃದ್ದಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ LEEE ತನ್ನ ಕಲಿಕಾ ಜಾಲದ ಮೂಲಕ ಸಂಶೋಧನಾ ನಿರತರಿಗೆ, ಇಂಜಿನಿಯರಿಂಗ್ ಪ್ರಾಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿರಂತರ ವೃತ್ತಿಪರ ಶಿಕ್ಷಣವನ್ನು ನೀಡುತ್ತದೆ. ಇದರ ಚಟುವಟಿಕೆಗಳು ಕಾಲೇಜಿನಲ್ಲಿ ವರ್ಷಪೂರ್ತಿ ನಡೆಯುತ್ತಿದ್ದು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. LEEE ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾಲೇಜು ಆಡಳಿತ ಮಂಡಳಿಯು ಕೊಡಮಾಡುವ ಉತ್ತಮ LEEE ಸ್ವಯಂಸೇವಕ ಪ್ರಶಸ್ತಿಯನ್ನು ಚಂದ್ರಪ್ರಕಾಶ್ ಶಂಕರ್ ನಾಯಕ್ ಹಾಗೂ ಅನುಶ್ರೀ ಅವರಿಗೆ ನೀಡಿ ಗೌರವಿಸಲಾಯಿತು. ಕಾಲೇಜಿನ LEEE ವಿಭಾಗದ ಸಂಚಾಲಕಿ ಡಾ.ಜೀವಿತಾ.ಬಿ.ಕೆ ವರದಿಯನ್ನು ಮಂಡಿಸಿದರು, LEEE ವಿದ್ಯಾರ್ಥಿ ವಿಭಾಗದ ಮುಖ್ಯಸ್ಥ ಜೀವಿತ್ ಪ್ರಸ್ತಾವನೆಗೈದರು. ಸಾತ್ವಿಕ್ ಅಜೇರು ಮತ್ತು ಅಕ್ಷಯ.ಪಿ.ಎಸ್ ಪ್ರಾರ್ಥಿಸಿದರು. ವುಮನ್ ಇನ್ ಇಂಜಿನಿಯರಿಂಗ್‍ನ ಮುಖ್ಯಸ್ಥೆ ಅಶ್ವಿಜಾ ಸ್ವಾಗತಿಸಿ, LEEE ಸಿಬ್ಬಂದಿ ಸಲಹೆಗಾರ್ತಿ ಪೆÇ್ರ. ರಜನಿ ರೈ ವಂದಿಸಿದರು. ನಿತ್ಯ ಕಾರ್ಯಕ್ರಮ ನಿರ್ವಹಿಸಿದರು.