ಉಡುಪಿ: ಆಕಾಶದೆತ್ತರಕ್ಕೆ ಬೆಳೆದು ದಾರಿಯುದ್ದಕ್ಕೂ ತಂಪನ್ನು ನೀಡುತ್ತಿದ್ದ ಸಾಲುಸಾಲು ಮರಗಳಿಗೆ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಯನ್ನು ಸಾರ್ವಜನಿಕರು ನಂದಿಸಿದ್ದಾರೆ.
ಈ ಘಟನೆ ನಡೆದಿರುವುದು ಉಡುಪಿಯ ಅಜ್ಜರಕಾಡು ವಾರ್ಡಿನ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ. ಈ ದಾರಿಯುದ್ದಕ್ಕೂ ಬೃಹದಾಕಾರದ ನಲ್ವತ್ತು ಅಡಿ ಎತ್ತರದ ಸಾಲುಸಾಲು ಮರಗಳು ಈ ಭಾಗದ ಜನರಿಗೆ ಸದಾ ತಂಪನ್ನು ನೀಡ್ತಾಯಿತ್ತು. ಆದ್ರೆ ಧಿಡೀರ್ ಈ ಮರದ ಬುಡದಲ್ಲಿ ಬೆಂಕಿಹೊತ್ತಿ ಉರಿಯಲಾರಂಬಿಸಿದೆ.
ಅಲ್ಲೇ ತೆರಳ್ತಾಯಿದ್ದ ಕೆಲ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಬೆಂಕಿಯನ್ನ ಕೂಡಲೇ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಲೆಕಟ್ಟಲಾಗದ ಈ ಮರದಕೆಳಗೆ ಕಸ ತ್ಯಾಜ್ಯ, ಒಣ ಕಟ್ಟಿಗೆ ರಾಶಿ ಹಾಕಿ ಬೆಂಕಿ ಹಾಕಿರುವುದು ಬೆಂಕಿ ನಂದಿಸಿದ ಬಳಿಕ ತಿಳಿದುಬಂದಿದೆ.
ಅಗ್ನಿಜ್ವಾಲೆಗೆ ಮರದ ಬುಡಭಾಗವು ಹೊತ್ತಿ ಉರಿದಿದ್ದು. ಮರ ಬದುಕವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದ್ದು ಈ ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳುವ ಮಾತು ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಇಂತಹ ಪರಿಸರ ವಿಘ್ನಗೊಳಿಸುವ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ.