Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ: ನೆರಿಯದಲ್ಲಿ ಉಕ್ಕಿ ಹರಿದ ನದಿ: ವಾಹನ ಸಂಚಾರ ಸಂಕಷ್ಟ-ಕಹಳೆ ನ್ಯೂಸ್

ಬೆಳ್ತಂಗಡಿ: ಮುಂಜಾನೆ ಯಿಂದ ಶಾಂತವಾದ ಮಳೆಯು ಮಧ್ಯಾಹ್ನ ಬಳಿಕ ಅಬ್ಬರಿಸುತ್ತಿರುವ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಎರಡು ದಿನಗಳಿಂದ ನೆರಿಯ ಭಾಗದಲ್ಲಿ ಪ್ರವಾಹದ ರೂಪದಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ.

ಅ. 8ರಂದು ರಾತ್ರಿ ಘಾಟಿ ಪ್ರದೇಶ ದಲ್ಲಿ ಹೆಚ್ಚಿದ ಮಳೆಯ ಪರಿಣಾಮ ನೆರಿಯ ಪ್ರದೇಶದ ಅಣಿಯೂರು ಹೊಳೆಗೆ ಅಡ್ಡಲಾದ ಕಿರು ಸೇರುವೆ ಮೇಲೆ ನೀರು ಹರಿದು ಸುತ್ತಮುತ್ತ ಆತಂಕ ನಿರ್ಮಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅ. 9ರಂದೂ ಸಂಜೆ ಮಳೆಯಾದ ಪರಿಣಾಮ ಪುಲ್ಲಾಜೆ ಸೇತುವೆ ಮುಳುಗಡೆಯಾಗಿ ಅಪಾಯ ಮಟ್ಟ ಮೀರಿ ನೀರು ಹರಿಯಿತು. ವಾಹನಗಳು ಬಹಳಷ್ಟು ಸಮಯ ಕಾಯಬೇಕಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿ ದ್ದಾರೆ. ಚಾರ್ಮಾಡಿ ಘಾಟಿ ಘಾಟಿ ಪ್ರದೇಶದಲ್ಲೂ ಹಾನಿ ಸಂಭವಿಸಿದೆ. ಮಳೆಯಿಂದಾಗಿ ವಿದ್ಯುತ್‌ ಸಮಸ್ಯೆ ಹಾಗೂ ಇಂಟರ್‌ ನೆಟವರ್ಕ್ ಸಮಸ್ಯೆ ಉಂಟಾಗಿತ್ತು.