Sunday, January 19, 2025
ಸುದ್ದಿಸುಳ್ಯ

ಬಿ.ಸಿ.ಎ ವಿಭಾಗದ ಫಾರಂ “ಟೆಕ್ ಕೆಡೆಟ್” ನ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ -ಕಹಳೆ ನ್ಯೂಸ್

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಸಿ.ಎ ಮುನ್ನಡೆಸುತ್ತಿರುವ ‘ಟೆಕ್ ಕೆಡೆಟ್’ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಅಕ್ಟೋಬರ್ 3ರ ಗುರುವಾರದಂದು ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ಕಾಲೇಜು ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ವಿಭಿನ್ನವಾಗಿ ವಿಡಿಯೋ ಕ್ಲಿಕ್ ಮಾಡೋ ಮೂಲಕ ‘ಟೆಕ್ ಕೆಡೆಟ್’ ಘಟಕದ ಲೋಗೋ ಲಾಂಚ್ ಮಾಡುವುದರ ಮೂಲಕ ಕೋರ್ಸಿನ ವಾರ್ಷಿಕ ಕಾರ್ಯಚಟುವಿಕೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ IQAC ಸಂಯೋಜಕಿ ಆದ ಡಾ. ಮಮತ ಕೆ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಿಸಿಎ ವಿಭಾಗದಿಂದ ಆಯೋಜಿಸುವ ವಾರ್ಷಿಕ ಕಾರ್ಯ ಚಟವಟಿಕೆಗಳಿಗೆ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಭವ್ಯ ಮನು ಪೆರುಮುಂಡ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ದೀಕ್ಷಾ ಹಾಗೂ ಉಪನ್ಯಾಸಕರಾದ ಕುಮಾರಿ ನವ್ಯ, ಕುಮಾರಿ ರಕ್ಷಾ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾಕಾರ್ಯಕ್ರಮದ ನಂತರ ಕಾಲೇಜಿನ ಪ್ಲೇಸ್ಮೆಂಟ್ ಆಂಡ್ ಕೆರಿಯರ್ ಸೆಲ್ ಸಹಯೋಗದಲ್ಲಿ ವೆಬಿನಾರ್ ಆಯೋಜಿಸಲಾಗಿತ್ತು. ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಡಾ. ಅತುರ್ ಫರ್ನಾಂಡಿಸ್ ವೃತ್ತಿ ಕೌಶಲ್ಯ ಮಾರ್ಗದರ್ಶನ ನೀಡಿದರು.