Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಮಂಗಳೂರುಸುದ್ದಿ

ಮಾದಕ ನಶೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ಬಿಲ್ಡರ್ ಮನೆಗೆ ನುಗ್ಗಿ ಹಲ್ಲೆ ಯತ್ನ : ಮಹೇಶ್ ಶೆಟ್ಟಿ ತಿಮರೋಡಿ ಅಣ್ಣನ ಮಗ, ಸಾಮಾಜಿಕ ಜಾಲತಾಣದ ನಕಲಿ ಖಾತೆ ಶೂರ ತನುಷ್ ಶೆಟ್ಟಿ ಅಂದರ್..!! – ಕಹಳೆ ನ್ಯೂಸ್

ಮಂಗಳೂರು : ನಗರದ ಪ್ರತಿಷ್ಠಿತ ಬಿಲ್ಡರ್ ಮನೆಗೆ ನುಗ್ಗಿ ಹಲ್ಲೆ ಯತ್ನ ಆರೋಪದಲ್ಲಿ ಇಬ್ಬರು ಯುವಕರನ್ನು ಪೊಲೀಸ್ ವಶಕ್ಕೆ ಪಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾರನ್ನು ಓವರ್ ಟೇಕ್ ಮಾಡಿದ್ದ ಕೋಪದಲ್ಲಿ, ಮಾದಕ ನಶೆಯಲ್ಲಿದ್ದ ಇಬ್ಬರು ಪುಂಡರು ಲೋಟಸ್ ಪ್ರಾಪರ್ಟೀಸ್ ಪಾಲುದಾರ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿದ ಇಬ್ಬರು ಯುವಕರು ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಜಿತೇಂದ್ರ ಕೊಟ್ಟಾರಿ ತಕ್ಷಣ ಬರ್ಕೆ ಠಾಣೆ ಪೊಲೀಸರಿಂದ ತನುಷ್ ಶೆಟ್ಟಿ, ಅಂಕಿತ್ ಶೆಟ್ಟಿ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾದಕ ನಶೆಯ ಅಮಲಿನಲ್ಲಿದ್ದ  ತನುಷ್ ಶೆಟ್ಟಿ ಯಾರು !?

ಮಹೇಶ್ ಶೆಟ್ಟಿ ತಿಮರೋಡಿಯ ಅಣ್ಣನ ಮಗ ಈ ಆರೋಪಿ ತನುಷ್ ಶೆಟ್ಟಿ, ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಕಲಿ ಕಾತೆ ಸೃಷ್ಟಿಸಿ, ಅನೇಕರ ತೇಜೋವಧೆ ಮಾಡುತ್ತಿದ್ದ ಎಂಬ ಆರೋಪ ಈತನ ಮೇಲೆ‌ ಇದೆ. ಬೆಳ್ತಂಗಡಿ ಪೋಲಿಸ್ ಠಾಣೆ, ಸೈಬರ್ ಕ್ರೈಮ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಅಲ್ಲದೆ, ಈ ಹಿಂದೆಯೂ ಅನೇಕ ಸಮಾಜ ಘಾತುಕ ಕುಕೃತ್ಯದಲ್ಲಿ ಈತ ಕೈವಾಡ ಇದ್ದರೂ, ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ, ಅದರೆ ಇದೀಗ ಅಮಾಯಕ ಬಿಲ್ಡರ್ ಮುಂದೆ ಬಿಲ್ಡಪ್ ಕೊಡಲು ಹೋಗಿ ಚಡ್ಡಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಸದ್ಯ ಅರೋಪಿಗಳು ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದು 14 ದಿನಗಳ‌ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.