ಮಂಗಳೂರು : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. “ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು ‘ಈ ಸೂ.. ಮಗ ಏನೆಲ್ಲಾ ಮಾಡಿಬಿಟ್ಟ’ ಎಂದು ಬೈಯುತ್ತಿದ್ದಾರೆ” ಎಂದು ರೋಷನ್ ಬೇಗ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳೂರಿನಲ್ಲಿ ಕಡಿಕಾರಿದ ಯುವಮೋರ್ಛಾ ಜಿಲ್ಲಾಧ್ಯಕ್ನಷ ಮಂಗಳೂರಿನ ಫಯರ್ ಬ್ಯಾಂಡ್ ಹರೀಶ್ ಪೂಂಜಾ ರೋಷನ್ ಬೇಜ್ ಒಬ್ಬ ದೇಶದ್ರೋಹಿಗೆ ಸಮ ಎಂದು ಹೇಳಿದ್ದಾರೆ .
ದೇಶದ ಪ್ರಧಾನಿಯನ್ನು ಸಂವಿಧಾನ ಬಾಹಿರ ಪದಗಳಲ್ಲಿ ನಿಂಧಿಸುವುದು ದೇಶದ್ರೋಹ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.