ಅ.12 ಶಾರದಾ ಪೂಜೆ ಹಿನ್ನಲೆ : ಮನೆಯಲ್ಲಿ ಮಕ್ಕಳಿಂದ ಪುಸ್ತಕಗಳಿಗೆ ಪೂಜೆ ಮಾಡಿಸಿ ವೀಡಿಯೋ ಕಳುಹಿಸುವಂತೆ ದೇವಾಲಯಗಳ ಸಂವರ್ಧನಾ ಸಮಿತಿಯಿಂದ ವಿನಂತಿ – ಕಹಳೆ ನ್ಯೂಸ್
ಕಳೆದೊಂದು ವಾರದಿಂದ ದೇಶದೆಲ್ಲೆಡೆ ಹಿಂದೂ ಆಸ್ತಿಕರು ನವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಪಾವನ ಸಮಯದಲ್ಲಿ ಮುಂದಿನ ಪೀಳಿಗೆಯಾದ ಮಕ್ಕಳಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಲು ಹಾಗೂ ಧರ್ಮ ರಕ್ಷಣೆಗೆ ಪ್ರೇರೆಪಿಸಲು ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗವು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಶರನ್ನವರಾತ್ರಿಯ ಕೊನೆಯ ದಿನವಾದ ಅ.12ರಂದು ಬೆಳಿಗ್ಗೆ ಮಕ್ಕಳಲ್ಲಿ ಶಾರದಾ ಪೂಜೆ ಮಾಡಿಸುವಂತೆ ಪೋಷಕರಿಗೆ ಅದು ಕರೆ ನೀಡಿದೆ.
ಅಂದು ಶಾರದಾ ಪೂಜೆಯ ಪ್ರಯುಕ್ತ ಮನೆಯಲ್ಲಿರುವ ಮಕ್ಕಳು ಮನೆಯ ದೇವರ ಕೋಣೆಯಲ್ಲಿ ತಮ್ಮ ಪಠ್ಯಪುಸ್ತಕಗಳು ಹಾಗೂ ಧಾರ್ಮಿಕ ಪುಸ್ತಕಗಳಿಗೆ ಹೂ ಇಟ್ಟು, ಶಾರದೆಗೆ ಹಾಲು ಹಣ್ಣು ಸಮರ್ಪಿಸಿ, ಆರತಿ ಎತ್ತಿ ಪೂಜಿಸುವಂತೆ ದೇವಾಲಯಗಳ ಸಂವರ್ಧನ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯಕ್ರಮ ನಿರ್ದೇಶಕರಾದ ಯದುಶ್ರೀ ಕೊಯಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಡಿಯೋ ಮಾಡುವಂತೆ ಮನವಿ
ದೀಪ ಬೆಳಗಿಸಿ ಆರತಿ ಮಾಡುವ ಈ ಪೂಜಾ ವಿಧಿಗಳ 10ರಿಂದ 20 ಸೆಕೆಂಡ್ಸ್ ನ ವಿಡಿಯೋ ವನ್ನು ಚಿತ್ರಿಕರಿಸಿ 99013 36916 ಎಂಬ ವಾಟ್ಸ್ಯಾಪ್ ಸಂಖ್ಯೆಗೆ ಕಳುಹಿಸುವಂತೆಯೂ ಪೋಷಕರಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರದ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಅ. 12 ರಂದು ರಾತ್ರಿ 10 ಗಂಟೆ ಒಳಗೆ ಎಲ್ಲರೂ ತಾವು ಚಿತ್ರೀಕರಿಸಿದ ವಿಡಿಯೋ ಹಾಗೂ ಭಾವಚಿತ್ರವನ್ನು ಕಳಿಸುವಂತೆ ಕೋರಲಾಗಿದೆ.
ಸಂಸ್ಕೃತಿಗೆ ಮೆರಗು ನೀಡುವ ಉಡುಪು ಧರಿಸಿ
ಈ ವಿಡಿಯೋವನ್ನು ಧಾರ್ಮಿಕ ಶಿಕ್ಷಣ ಕೇಂದ್ರದ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಮಕ್ಕಳೆಲ್ಲರೂ, ನಮ್ಮ ಸಂಸ್ಕೃತಿಗೆ ಮೆರಗು ನೀಡುವಂತಹ ಧಾರ್ಮಿಕ ಉಡುಪು, ಕೇಸರಿ ಶಾಲು ಧರಿಸಿ ವಿಡಿಯೋ ಮಾಡಿ ಕಳುಹಿಸಬೇಕು. ಹೆಣ್ಣು ಮಕ್ಕಳು ಲಂಗ ರವಕೆ ಹಾಗೆಯೇ ಗಂಡು ಮಕ್ಕಳು ಕುರ್ತಾ ಪೈಜಾಮ ಅಥವಾ ಲುಂಗಿ ಮತ್ತು ಶಾಲನ್ನು ಧರಿಸಿ ಭಾಗವಹಿಸಿದರೆ ಉತ್ತಮ ಎಂದು ಧಾರ್ಮಿಕ ಶಿಕ್ಷಣ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು 99013 36916 ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ದೇವಿ ಶಾರದೆಯ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ