Sunday, January 19, 2025
ಬೆಂಗಳೂರುಬೆಳಗಾವಿರಾಜಕೀಯರಾಜ್ಯಸುದ್ದಿ

ದಸರಾದಲ್ಲಿ ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ : ಪ್ರಕಟಣೆ ಹೊರಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ – ಕಹಳೆ ನ್ಯೂಸ್

BJP leader Basangauda Patil Yatnal during a press conference in Kalaburagi on Monday. -KPN ### Yatnal PC at Kalaburagi

ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ದಸರಾದಲ್ಲಿ ಮುಸ್ಲಿಂರ ಬಳಿ ವ್ಯಾಪಾರ ಮಾಡಬೇಡಿ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಹಣೆಗೆ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂಗಳ ಹತ್ತಿರವೇ ಪೂಜಾ ಸಾಮಾಗ್ರಿಗಳನ್ನು ಖರೀದಿಸುವುದರಿಂದ, ನಮ್ಮ ಹಬ್ಬಗಳ ಪಾವಿತ್ರ್ಯತೆ ಕಾಪಾಡಿಕೊಂಡು, ಮಡಿವಂತಿಕೆಯಿಂದ ಧರ್ಮಾನುಸಾರವಾಗಿ ನಡೆದುಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪವಿತ್ರ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲದ, ಹಿಂದೂ ದೇವರನ್ನು ನಂಬದ, ಹಿಂದೂಗಳನ್ನು ವಿರೋಧಿಸುವರು ಅಲ್ಲಿಯೇ ತಮ್ಮ ಬುತ್ತಿಯಲ್ಲಿ ಮಾಂಸಾಹಾರ ತಂದು ತಿಂದು ಅಥವಾ ಮನೆಯಲ್ಲಿ ಮಾಂಸಾಹಾರ ತಿಂದು ಬಂದು, ಅಶುದ್ಧತೆಯಿಂದ ವ್ಯಾಪಾರ ಮಾಡುವವರ ಹತ್ತಿರ ಯಾವುದೇ ಕಾರಣಕ್ಕೂ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಾರದು.

ಅಂತವರ ಹತ್ತಿರ ಖರೀದಿಸಿದ ವಸ್ತುಗಳಿಂದ, ನಾವು ಪೂಜಿಸುವ ಭಗವಂತನ ಪೂಜೆಯು ಅಪವಿತ್ರತೆಯಿಂದ ಕೂಡಿ, ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಮುಸ್ಲಿಂ ವ್ಯಾಪಾರಿಗಳು ವಿರೋಧ ಮಾಡಿದ್ದಾರೆ. ಯತ್ನಾಳ್​ ಸುಮ್ಮನೇ ಮಾತನಾಡುತ್ತಾರೆ. ಈಗ ಯತ್ನಾಳ್​ ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಇಲ್ಲಿ ನಾವು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವವಿಲ್ಲದೇ ವ್ಯಾಪಾರ ಉದ್ಯೋಗ ಮಾಡಿಕೊಂಡು ಹೋಗುತ್ತಿದ್ದೇವೆಂದಿದ್ದಾರೆ.