Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು… ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ –ಕಹಳೆ ನ್ಯೂಸ್

ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು, ಆ ಮೂಲಕ ಹಿಂದೂ ಧರ್ಮದ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯ ಆಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಅವರು ಕಲ್ಲಡ್ಕ ಕೆ ಟಿ ಹೋಟೆಲ್ ಲಕ್ಷ್ಮಿ ಗಣೇಶ್ ಇದರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ 6ನೇ ವರ್ಷದ ಸಂಭ್ರಮಾಚರಣೆಯ ಸಾಂಪ್ರದಾಯಿಕ ದಸರಾ ಹುಲಿಗಳು- 2024 ರ ಹುಲಿವೇಶಕ್ಕೆ “ಊದು ಹಾಕುವ” ಕಾರ್ಯಕ್ರಮದ ನಿಮಿತ್ತ ಕಲ್ಲಡ್ಕ ಶ್ರೀರಾಮ ಮಂದಿರದ ಪ್ರತಾಪ್ಗಡ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕದ ಪ್ರಮುಖರು ಕಲ್ಲಡ್ಕ ಲಕ್ಷ್ಮೀ ಗಣೇಶ್ ಕೆ ಟಿ ಹೋಟೆಲ್ ಮಾಲಕರಾದ ರಾಜೇಂದ್ರ ಹೊಳ್ಳ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಹಿರಿಯ ಹುಲಿ ವೇಷದಾರಿ ಡೊoಬಯ್ಯ ಟೈಲರ್ ಕಲ್ಲಡ್ಕ, ಹುಲಿ ವೇಷದಲ್ಲಿ ಅಕ್ಕಿಮುಡಿ ಹಾರಿಸುವ ಪುರುಷೋತ್ತಮ ಮಾಣಿಮಜಲು, ಚಿತ್ರ ಕಲಾವಿದ ಯೋಗೀಶ್ ಆಚಾರ್ಯ ಇವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ಕಲ್ಲಡ್ಕ ವ್ಯಾಪ್ತಿಯಲ್ಲಿ ವಿವಿದ ರೀತಿಯ ಸಮಾಜ ಸೇವ ಕಾರ್ಯಕ್ರಮವನ್ನು ನಡೆಸುತ್ತಿರುವ ಸುಮಾರು 44 ಸಂಘ ಸಂಸ್ಥೆಗಳನ್ನು ಗುರುತಿಸಿ ನೆನಪಿನ ಸ್ಮರಣೆಕ್ಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪುತ್ತೂರು ಪಿಲಿಗೊಬ್ಬ ರುವಾರಿ ಸಹಜ್ ರೈ ಬಳಜ್ಜ, ವಿಭಾಗ ಸಂಚಾಲಕ ಪುನೀತ್ ಅತ್ತಾವರ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ನಿತ್ಯಾನಂದ ಆಶ್ರಮ ಕಾಂಜೇಗಾಡ್ನ ಗಣಪತಿ ಸ್ವಾಮಿ, ಹಿಂದೂ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ರಂಜನ್ ಬಲ್ಯಾಯ, ಮೊದಲಾದವರು ಉಪಸ್ಥಿತರಿದ್ದರು.
ಸಬಾ ಕಾರ್ಯಕ್ರಮದ ಮೊದಲು ಮೈಸೂರು ರಾಮಚಂದ್ರ ಆಚಾರ್ಯರಿಂದ ನಡೆದ ಸುಧೀರ್ಘ ಮೂರು ಗಂಟೆಯ ದಾಸವಾಣಿ ಕಾರ್ಯಕ್ರಮ ಹಾಗೂ ಸ್ಥಳೀಯ ಕುಣಿತ ಭಜನೆ ತಂಡಗಳ ಭಜನಾ ಕುಣಿತ ಎಲ್ಲರ ಮನಸೋರೆಗೊಂಡಿತು.

ಒಂದರಿAದ ಒಂಬತ್ತು ವರ್ಷದ ಮಕ್ಕಳಿಗೆ ಬಾಲ ಭೋಜನ ಎಂಬ ವಿಶೇಷ ಕಾರ್ಯಕ್ರಮ ಜರಗಿತು.
ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ದ ಮುಖ್ಯಸ್ಥರಾದ ನಾಗರಾಜ್ ಕಲ್ಲಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಪ್ರಜಿತ್ ಕೆಂಪುಗುಡ್ಡೆ ವಂದಿಸಿ ದರು. ಗೋಪಾಲ್ ಬಲ್ಯಾಯ ಕಲ್ಲಡ್ಕ ಹಾಗೂ ಉದಯ ಕೆಲಿಂಜ ಕಾರ್ಯಕ್ರಮ ನಿರೂಪಿಸಿದರು.