Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟಕ್ಕೆ ತೆರಳುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಹಾರೈಕೆ- ಕಹಳೆ ನ್ಯೂಸ್

ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟವು ಅಕ್ಟೋಬರ್‌ 14ರಿಂದ 17ರ ವರೆಗೆ ಸರಸ್ವತಿ ಶಿಶುಮಂದಿರ, ಮುಖರ್ಜಿನಗರ, ದೇವಸ್‌,ಮಧ್ಯಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಆಯ್ಕೆಯಾಗಿರುತ್ತದೆ. ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ಅದ್ವಿತ್‌ ಶರ್ಮ, ದುರ್ಗೇಶ್‌ ಮೌರ್ಯ.ಎಚ್. ಎನ್‌, ಸೃಜನ್‌ ಡಿ. ಲಕ್ಕಪ್ಪನವರ್ ಹಾಗೂ ಪ್ರಥಮ ಪಿಯುಸಿಯ ಪ್ರಮಥ ಎಮ್‌ ಭಟ್‌, ರಾಮಪ್ರಸಾದ್‌ ಬಿ.ಎನ್‌ ಇವರು ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ಸಂಪನ್ನಲಕ್ಷ್ಮಿ ಕೆ, ಧೃತಿ ಪ್ರದೀಪ್‌ ಪೂಜಾರಿ, ಸಾತ್ವಿ ಬಿ.ಕೆ , ತೃಪ್ತಿ ಎ.ಕೆ ಹಾಗೂ ಪ್ರಥಮ ಪಿಯುಸಿಯ ಪ್ರಾಪ್ತಿ ಶೆಟ್ಟಿ ಇವರು ಭಾಗವಹಿಸಲಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಶುಭಹಾರೈಸಿರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌, ಡಾ. ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು