Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಯೋಧ್ಯಾ ಫ್ರೆಂಡ್ಸ್, ಪೆರ್ನೆ ಇದರ ಆಶ್ರಯದಲ್ಲಿ ನ.02ರಂದು 6ನೇ ವರ್ಷದ ಸಾರ್ವಜನಿಕ ಕ್ರೀಡಾಕೂಟ – ಕಹಳೆ ನ್ಯೂಸ್

ಉಪ್ಪಿನಂಗಡಿ : ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಯೋಧ್ಯಾ ಫ್ರೆಂಡ್ಸ್, ಪೆರ್ನೆ ಇದರ ಆಶ್ರಯದಲ್ಲಿ ನ.02ರಂದು ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆಯುವ 6ನೇ ವರ್ಷದ ಸಾರ್ವಜನಿಕ ಕ್ರೀಡಾಕೂಟ ನಡೆಯಲಿದೆ.

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ|| ರಾಮಕೃಷ್ಣ ಭಟ್ ಹಾಗೂ ಯಮುನಾ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ.02ರಂದು ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಕ್ರೀಡಾಕೂಟ ನಡೆಯಲಿದ್ದು, ಬೆಳಗ್ಗೆ 07ಗಂಟೆಗೆ ಮ್ಯಾರಥಾನ್ ಓಟ, ಬಳಿಕ ಮಹಿಳೆಯರಿಗೆ, ಪುರುಷರಿಗೆ, ಯುವಕ-ಯುವತಿಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದ ಸಂಚಾಲಕರಾದ ಹರೀಶ್ ಭಂಡಾರಿ.ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಬೆಂಗಳೂರು (ರಿ) ಇದರ ಉಪಾಧ್ಯಕ್ಷರು ಹಾಗೂ ವಕೀಲರಾದ ಮಹೇಶ್ ಕಜೆ, ಶ್ರೀ ರಾಮಚಂದ್ರ ಪದವಿ ಪೂರ್ವವಿದ್ಯಾಲಯ ಪ್ರಾಂಶುಪಾಲರಾದ ಶೇಖರ ರೈ.ಕೆ, ಬ್ಯಾಂಕ್ ಆಫ್ ಬರೋಡಾ ಪೆರ್ನೆ ಬ್ರಾಂಚ್ ನ ಮ್ಯಾನೇಜರ್ ಅಕ್ಷಯ್ ಕೋಟಿಯನ್, ಪೆರ್ನೆ ಅಯೋಧ್ಯಾನಗರದ ಶ್ರೀರಾಮಚಂದ್ರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ರೈ ಕೆ.ಎಂ, ಮಜೀದಿಯ ದೋರ್ಮೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದೋರ್ಮೆ ಇದರ ನಿವೃತ ಮುಖ್ಯೋಪಾಧ್ಯಾಯರಾದ ಗೋಪಾಲ ಕೃಷ್ಣ ಭಟ್, ಬೆದ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯ ಕಾರ್ಲ ಭಾಗವಹಿಸಲಿದ್ದಾರೆ.

ಆ ಬಳಿಕ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ ಗಡಿನಾಡ ಬೊಳ್ಳಿ ಸುರೇಶ್ ಮಂಜೇಶ್ವರ ರಚನೆಯ ಲಯನ್ ಕಿಶೋರ್ ಡಿ ಶೆಟ್ಟಿ ಅವರ ನಿರ್ದೇಶನದ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಅವರ ವಿಭಿನ್ನ ಅಭಿನಯದ “ಒರಿಯಾಂಡಲಾ ಸರಿಬೋಡು” ಎಂಬ ಹಾಸ್ಯಮಯ ನಾಟಕ ನಡೆಯಲಿದೆ.