Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಬೆಳ್ತಂಗಡಿಸುದ್ದಿ

ಶ್ರೀ ರಾಮ ಶಿಶುಮಂದಿರದಲ್ಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರ ಅಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರ ಅಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ ಸಡಗರದಿಂದ ನಡೆಯಿತು.

ಪುರೋಹಿತರು ಶಾರದಾ ಪೂಜೆ, ಹಾಗೂ ಮಾತೃ ಮಂಡಳಿಯವರಿAದ ಭಜನಾ ಕಾರ್ಯಕ್ರಮ ಮತ್ತು ವಾಹನ ಪೂಜೆ, ಹಾಗೂ ಉಪಹಾರದ ವ್ಯವಸ್ಥೆಯಲ್ಲಿ ನಡೆಯಿತು. ಉಪಹಾರವನ್ನು ಭರಥೇಶ್ ಜಾಲ್ನಡೇ, ದಿನೇಶ್ ಕೆಲೆಂಜಮಾರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಶ್ರೀ ರಾಮ ಶಿಶು ಮಂದಿರದ ಮಕ್ಕಳು ಪೋಷಕರು ಮಾತಾಜಿಯವರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು ವಿಶೇಷವಾಗಿ ಜೈ ಶ್ರೀ ರಾಮ್ ಮಹಿಳಾ ಸಂಘವನ್ನು ಸಸಿ ನೆಡುವುದರ ಮೂಲಕ ಉದ್ಘಾಟನೆಯನ್ನು ನೆರೆವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ತೀರ್ಥಕಲಾ ಮುಂಡಾಜೆ ಉಪಾಧ್ಯಕ್ಷರಾದ ಶಶಿಪ್ರಭ ಕೊಂಬೇಡಿ,ಮಮತಾ ಕೆಲೆಂಜಿAರು ಕಾರ್ಯದರ್ಶಿಯಾದ ಭವ್ಯ ಗಣೇಶ ಕೇದಾಗೇಕೋಡಿ , ಜೊತೆಗೆ ಕಾರ್ಯಧರ್ಶಿಮಂಜುಶ್ರೀ ಉಂತಣಾಜೆ, ಸುಮಾ ಎರ್ಮಲ, ಕೋಶಾಧಿಕಾರಿ ಸವಿತಾ ಪದ್ಮುಂಜಾ, ಭವ್ಯ ಪರಕ್ಕಾಜೆ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.