Recent Posts

Monday, January 20, 2025
ಉಡುಪಿಸುದ್ದಿ

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು-ಕಹಳೆ ನ್ಯೂಸ್

ಉಡುಪಿ : ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 9 ದಿನಗಳ ಕಾಲ ನಡೆದ 3ನೇ ವರ್ಷ ಉಚ್ಚಿಲ ದಸರಾ ಮಹೋತ್ಸವ 2025ರ ಸಂದರ್ಭ ಪೂಜಿತ ಶ್ರೀ ಶಾರದಾಂಬೆ ಸಹಿತ ನವದುರ್ಗೆಯರ ಮೃಣ್ಮಯ ಮೂರ್ತಿಗಳ ವಿಸರ್ಜನೆ ಶನಿವಾರ ರಾತ್ರಿ ಕಾಪು ಬೀಚ್ ನಲ್ಲಿ ಅದ್ದೂರಿಯಾಗಿ ಸಂಪನ್ನಗೊAಡಿತು. ಉಚ್ಚಿ ದೇವಸ್ಥಾನದಿಂದ ಹೊರಟು ಎರ್ಮಾಳು ಮೂಲಕ ಹಾದು ಕಾಪು ಕೊಪ್ಪಲಂಗಡಿ ಮೂಲಕ ವೈಭವದ ಶೋಭಾಯಾತ್ರೆಯಲ್ಲಿ ಕಾಪು ಬೀಚ್ ತಲುಪಿದ ನವದುರ್ಗೆಯರನ್ನು ಸುಮಂಗಲಿಯರು ಪುಷ್ಪವೃಷಿ ಗೈಯ್ಯುವ ಮೂಲಕ ಸ್ವಾಗತಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಬೀಚ್ ನಲ್ಲಿ ವಿಶೇಷವಾಗಿ ನಿರ್ಮಿಸಿದ ಪೀಠಗಳಲ್ಲಿ ಸ್ಥಾಪಿಸಿ ಗಂಗಾರತಿ , ಸಮುದ್ರಾರತಿ ಹಾಗು ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವತಾ ಮೂರ್ತಿಗಳಿಗೆ ಡ್ರೋಣ್ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಿತು.
ಬಿರುಸುಗೊಂಡ ಕಡಲು ಶೋಭಾ ಯಾತ್ರೆ ಮುಗಿದು ವಿಗ್ರಹಗಳಿಗೆ ಕಾಪು ಬೀಚ್ ಬಳಿ ಗಂಗಾರತಿ ಬೆಳಗಿ ತದನಂತರ ಸಮುದ್ರಕ್ಕೆ ವಿಸರ್ಜನೆ ಮಾಡುವ ಸಮಯದಲ್ಲಿ ಕಡಲು ಬಿರುಸುಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿ ನವದುರ್ಗಸಹಿತವಾದ ಶಾರದಾ ಮಾತ್ರೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಸಮಯದಲ್ಲಿ ಕಾಪ್ ಬೀಚಿನ ಭಾಗ ಸಂಪೂರ್ಣ ಜನಸ್ತೋಮದಿಂದ ತುಂಬಿಹೋಗಿತ್ತು ಸಾವಿರ ಸಾವಿರ ಸುಮಂಗಲೆಯರು ನವದುರ್ಗ ಸಹಿತವಾಗಿ ಶಾರದಾ ಮಾತೆಗೆ ದೀಪವನ್ನು ಬೆಳಗಿ ಆರತಿ ಮಾಡಿದರು. ಸುಮಾರು 11 ಗಂಟೆಯ ಸಮೀಪ ಕಾಪು ಬೀಚ್ ಭಾಗದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದಸರಾ ಸಂಪನ್ನತೆಯಲ್ಲಿ ಸಾಕ್ಷಿಯಾದರು.