Recent Posts

Monday, January 20, 2025
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಡಿಯೋ ಲೀಕ್ ; ತಲೆ ಕೆಡಿಕೊಳ್ಳದೆ ʼಎಂಜಾಯ್ʼ ಮಾಡಿ ಎಂದ ಕಿರಾತಕ ನಟಿ.! – ಕಹಳೆ ನ್ಯೂಸ್

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳ ಖಾಸಗಿ ವೀಡಿಯೊಗಳು ವೈರಲ್ ಆಗುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಒಂದೋ ಇದನ್ನು ಶೇರ್ ಮಾಡಬೇಡಿ ಅಂತಲೋ ಅಥವಾ ಅದನ್ನು ಮಾರ್ಫ್ ಮಾಡಲಾಗಿದೆ ಎಂದು ಹೇಳುವುದು ಸಾಮಾನ್ಯ ಸಂಗತಿ. ಆದರೆ ಈಗ ನಡೆದಿರುವ ಘಟನೆಯೊಂದು ಅದಕ್ಕೆ ವ್ಯತಿರಿಕ್ತವಾಗಿದೆ.


ಹೌದು, ತಮಿಳು ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಓವಿಯಾ ಅವರ ಖಾಸಗಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಆನೇಕ ಸೋಷಿಯಲ್ ಮೀಡಿಯಾ ಬಳಕೆದಾರರು ಇದನ್ನು ಅವರ ಗಮನಕ್ಕೆ ತರಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ನಟಿಯ ಪ್ರತಿಕಿಯೆ ಮಾತ್ರ ಅಚ್ಚರಿ ಹುಟ್ಟಿಸುವಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಮಾಧ್ಯಮ ಬಳಕೆದಾರರು ‘ನಿಮ್ಮ 17 ಸೆಕೆಂಡುಗಳ ವೀಡಿಯೊ ಲೀಕ್ ಆಗಿದೆ ಮೇಡಂ’ ಎಂದು ಕಾಮೆಂಟ್ ಮಾಡಿದ್ದು, ಇದಕ್ಕೆ ನಟಿ ಓವಿಯಾ ‘ಎಂಜಾಯ್’ ಎಂದು ಉತ್ತರಿಸಿದ್ದಾರೆ. ತಮ್ಮ ಖಾಸಗಿ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಹೇಳುವ ಇತರ ಪೋಸ್ಟ್ಗಳಿಗೂ ಅವರು ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗೆ ತಲೆಕೆಡಿಸಿಕೊಳ್ಳದೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಡಿಯೋ ಸಾರ್ವಜನಿಕವಾಗಿ ಹರಿದಾಡದಿದ್ದರೂ, ಈ ವಿಷಯ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಟ್ವಿಟರ್‌ನಲ್ಲಿ ‘#ಔviಥಿಚಿಐeಚಿಞeಜ’ ಟ್ಯಾಗ್ ಭಾರತದಾದ್ಯಂತ ಟ್ರೆಂಡಿAಗ್ ಕೂಡ ಆಗಿತ್ತು.