Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿಸಿರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ಕಾಮಾಜೆ ನಿವಾಸಿ ಕರುಣಾಕರ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.

ಮರದ ಕೆಲಸ ಮಾಡುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಕರುಣಾಕರ ಅವರೇ ಮನೆಯ ಆಧಾರಸ್ತಂಭವಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣುಮಗುವಿದೆ. ಸುಮಾರು 11 ಗಂಟೆಯ ವೇಳೆ ಬಿಜಾಪುರದಿಂದ ಮಂಗಳೂರಿಗೆ ಆಗಮಿಸುವ ರೈಲು ಡಿಕ್ಕಿಯಾಗಿದೆ.ಬಿಸಿರೋಡಿನ ರೈಲು ಸ್ಟೇಷನ್ ನ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಎರಡು ಮಾರ್ಪಾಡು ಆಗಿರುವ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ಸಾವಿಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ನಿಗೂಡವಾಗಿದ್ದು, ಇದು ಆತ್ಮಹತ್ಯೆ ಯೇ? ಅಥವಾ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾ ? ಎಂಬುದು ಮಾಹಿತಿ ಲಭ್ಯವಾಗಿಲ್ಲ. ಕಾಮಾಜೆಯಿಂದ ಬಿಸಿರೋಡಿಗೆ ಮತ್ತು ಕೆಲಸಕ್ಕೆ ಹೋಗುವ ವೇಳೆ ಇದೇ ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಂಬ ವಿಚಾರವನ್ನು ಈತನಕುಟುಂಬಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು