Sunday, January 19, 2025
ಕ್ರೈಮ್ಬೆಂಗಳೂರುಸಿನಿಮಾಸುದ್ದಿ

Actress Oviya: ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ‘ಕಿರಾತಕʼ ನಟಿಯ ಖಾಸಗಿ ವಿಡಿಯೋ ವೈರಲ್; ದೂರು ದಾಖಲಿಸಿದ ನಟಿ – ಕಹಳೆ ನ್ಯೂಸ್

ಚೆನ್ನೈ: ಕಳೆದ ಕೆಲ ದಿನಗಳಿಂದ ಇಂಟರ್‌ ನೆಟ್‌ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರದ್ದು (South Indian actress) ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಮಾಲಿವುಡ್‌ (Mollywood) ಹಾಗೂ ಕಾಲಿವುಡ್‌ನಲ್ಲಿ (Kollywood) ನಟಿಯಾಗಿ ಗುರುತಿಸಿಕೊಂಡಿರುವ ಓವಿಯಾ ಹೆಲೆನ್ (Oviya Helen) ಅವರದ್ದು ಎನ್ನಲಾಗುತ್ತಿರುವ ಎಂಎಂಎಸ್‌ ವಿಡಿಯೋವೊಂದು ʼಎಕ್ಸ್ʼ ಹಾಗೂ ಇತರೆ ಸಾಮಾಜಿಕ ಜಾಲತಾಣಲ್ಲಿ ಹರಿದಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ನಟಿ ಈ ಬಗ್ಗೆ ಪೊಲೀಸ್‌ ಠಾಣಾ ಮೆಟ್ಟಿಲೇರಿದ್ದಾರೆ. ಓವಿಯಾ ಚೆನ್ನೈ ಪೊಲೀಸ್ ಕಮಿಷನರ್ ಬಳಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ನಟಿ ಓವಿಯಾ ಅವರ ಮ್ಯಾನೇಜರ್, ನಟಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಹೇಳಿದ್ದಾರೆ. ಓವಿಯಾ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಯಾರೋ ಮಾರ್ಫ್ ಮಾಡಿರುವ ವಿಡಿಯೋ ಇದಾಗಿದ್ದು, ಈ ಕುರಿತು ಅವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಕೆಯ ಮ್ಯಾನೇಜರ್ ಹೇಳಿದ್ದಾರೆ.

ಇದೊಂದು “ಸೂಕ್ಷ್ಮ ವಿಷಯ” ಮತ್ತು ಆರೋಪಿಗಳ ಬಗ್ಗೆ ಹೆಚ್ಚು ಮಾತನಾಡಲು ಅಥವಾ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ನಟಿಯಿಂದ ಖಡಕ್‌ ರಿಪ್ಲೈ:

ವಿಡಿಯೋ ಲೀಕ್‌ ಆಗಿದೆ ಎನ್ನುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ನಟಿ ಓವಿಯಾ ತನ್ನ ಫೋಟೋ ಕೆಳಗೆ ಕಮೆಂಟ್‌ ಮಾಡಿರುವವರಿಗೆ ಖಡಕ್‌ ಆಗಿಯೇ ರಿಪ್ಲೈ ಮಾಡಿದ್ದರು. ಏನೇ ಕಮೆಂಟ್‌ ಬಂದರೂ ಅದಕ್ಕೆ ಧೈರ್ಯವಾಗಿಯೇ ರಿಪ್ಲೈ ಕೊಟ್ಟಿದ್ದರು.

ಓವಿಯಾ ಅವರ ಫೋಟೋ ಕೆಳಗೆ ಕಮೆಂಟ್‌ ಮಾಡಿರುವ ಒಬ್ಬಾತ “17 ಸೆಕೆಂಡ್‌ ಗಳ ವೀಡಿಯೋ ಇಲ್ಲಿದೆ ಮೇಡಂ” ಎಂದು ಮನ್ಷನ್‌ ಮಾಡಿದ್ದಾನೆ. ಇದಕ್ಕೆ ರಿಪ್ಲೈ ಕೊಟ್ಟಿರುವ ನಟಿ “ಎಂಜಾಯ್‌ ಮಾಡಿ” ಎಂದಿದ್ದರು.

ಯಾರು ಈ ಓವಿಯಾ ಹೆಲೆನ್? : ದಕ್ಷಿಣ ಭಾರತದ ಸಿನಿಮಾ ನಟಿ ಓವಿಯಾ ಹೆಲೆನ್ ಮೂಲತಃ ತಮಿಳು ಚಿತ್ರರಂಗಕ್ಕೆ ಸೇರಿದವರು. ಇವರ ಮೂಲ ಹೆಸರು ಹೆಲ್ಸನ್ ನೆಲ್ಸನ್.. ಅವರು 2009 ರಿಂದ ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯರಾಗಿದ್ದಾರೆ.

2007ರಲ್ಲಿ ಬಂದ ʼಕಾಂಗರೂʼ ಮಲಯಾಳಂ ಸಿನಿಮಾದಲ್ಲಿ ನಟಿಯಾಗಿ ಎಂಟ್ರಿ ಕೊಟ್ಟ ಅವರು, ಆ ಬಳಿಕ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡರು. ʼನಲ್ಲೈ ನಮದೆʼ (ತಮಿಳು) ʼಪುಟ್ಟುಮುಖಂಗಲ್ʼ (ಮಲಯಾಳಂ) , ‘ಕಿರಾತಕʼ (ಕನ್ನಡ), ʼಮರೀನಾʼ (ಮಲಯಾಳಂ) ʼಪುಲ್ಲಿವಾಲ್ʼ (ತಮಿಳು) , ʼಕಾಂಚನಾ -3 ʼ ʼಬೂಮರ್‌ ಅಂಕಲ್‌ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಿಗ್‌ ಬಾಸ್‌ ಸ್ಪರ್ಧಿ..: ಸಿನಿಮಾರಂಗ ಹೊರತುಪಡಿಸಿದರೆ ಓವಿಯಾ 2017ರಲ್ಲಿ ಬಂದ ಬಿಗ್‌ ಬಾಸ್‌ ತಮಿಳು -1 (Bigg Boss Tamil) ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್‌ ಬಾಸ್‌ ತಮಿಳು -2 ನಲ್ಲಿ ಅತಿಥಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು.