Recent Posts

Monday, April 14, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ಇಬ್ಬರು ಮುಸ್ಲಿಂ ಮಹಿಳೆಯರ ಸಹಿತ ಓರ್ವ ವ್ಯಕ್ತಿಯಿಂದ ಅಕ್ರಮ ಗೋ ಸಾಗಾಟ ‌ಪ್ರಕರಣ ; ಅರೋಪಿಗಳಾದ ಇಬ್ರಾಹಿ, ರೆಹಮಾತ್, ಸಫಿಯಾ ನ್ಯಾಯಾಂಗ ಬಂಧನ, ಆಟೋ ರಿಕ್ಷಾ ಹಾಗೂ ಬೈಕ್ ವಶಕ್ಕೆ; ಇತಿಹಾಸದಲ್ಲೇ‌ ಮೊದಲಬಾರಿಗೆ ಆಕ್ರಮ ಗೋಸಾಗಾಟದಲ್ಲಿ ಮುಸ್ಲಿಂ ಮಹಿಳೆಯರು ಅಂದರ್….!!!- ಕಹಳೆ ನ್ಯೂಸ್

ಆಟೋ ರಿಕ್ಷಾವೊಂದರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಅಕ್ರಮವಾಗಿ ಗೋವನ್ನು ಸಾಗಾಟ ಮಾಡುತ್ತಿರುವ ಕುರಿತು ಬಜರಂಗದಳ ಸಂಘಟನೆಯಿಂದ ಬಂದ ಮಾಹಿತಿಯಂತೆ ಪೊಲೀಸರು ರ್ಬೆ ಬೈಪಾಸ್ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ತಡೆದು ಅಪಾಯಕಾರಿ ಸ್ಥಿತಿಯಲ್ಲಿದ್ದ ಗೋವನ್ನು ರಕ್ಷಣೆ ಮಾಡಿ, ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ ಘಟನೆ ಅ.16ರಂದು ನಡೆದಿದೆ. ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಜೊತೆಯಲ್ಲಿದ್ದ ರೆಹಮತ್, ಸಫಿಯಾ ಅವರು ಪರವಾನಿಗೆ ಇಲ್ಲದೆ ಗೋವನ್ನು ಅಕ್ರಮವಾಗಿ ಸಾಗಾಟ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಸಾಗಾಟ ಮಾಡುತ್ತಿದ್ದವರು ಎಂದು ಆರೋಪಿಸಲಾಗಿದೆ. ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ರಿಕ್ಷಾವನ್ನು ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂರ್ಭ ರಿಕ್ಷಾಕ್ಕೆ ಬೆಂಗಾವಲಾಗಿ ಬೈಕ್ ವೊಂದು ಬಂದಿತ್ತೆನ್ನಲಾಗಿತ್ತು.ಪೊಲೀಸರು ಮಹಜರು ನಡೆಸುವ ಸಂರ್ಭ ರಿಕ್ಷಾದ ಬಳಿ ವಾರಸುದಾರರಿಲ್ಲದ ಬೈಕ್ ಪತ್ತೆಯಾಗಿತ್ತು.ಬೈಕ್ನ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಬೈಕ್ ನಂಬರ್ ಆಧರಿಸಿ ವಿಳಾಸ ಪಡೆದ ಪೊಲೀಸರಿಗೆ ಬೈಕ್ನ ಇನ್ಶೂರೆನ್ಸ್ ಲ್ಯಾಪ್ಸ್ ಆಗಿರುವ ಮಾಹಿತಿ ಲಭ್ಯವಾದ ಬೆನ್ನಲ್ಲಿ ಆಟೋ ರಿಕ್ಷಾದ ಜೊತೆ ಬೈಕ್ ಅನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾಲಕ ತಿಳಿಸಿದ್ದಾರೆ. ಆದರೆ ಗೋ ಸಾಗಾಟಕ್ಕೆ ಯಾವುದೇ ಅನುಮತಿ ಇರದಿರುವುದು ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಗೋವನ್ನು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಇಬ್ರಾಹಿಂ ಮತ್ತು ರಿಕ್ಷಾದಲ್ಲಿದ್ದ ರೆಹಮತ್ ಮತ್ತು ಸಫಿಯಾ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಅಕ್ರಮ ಮತ್ತು ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಿದ್ದಾರೆ. ಗೋವನ್ನು ಠಾಣೆಯ ಬಳಿ ಕಟ್ಟಿಹಾಕಲಾಗಿದೆ. ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳಿಗೆ ನ್ಯಾಯಾಂಗ ಬಂಧನ: ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಮತ್ತು ರೆಹಮತ್ ಸಫಿಯಾ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ