Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ ‘ಕಂಬಳ ಕೂಟ’-ಕಹಳೆ ನ್ಯೂಸ್

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ರೋಟರಿ ಕ್ಲಬ್ ವತಿಯಿಂದ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ ‘ಕಂಬಳ ಕೂಟ’ ಆಯೋಜಿಸಲು ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಮುಂದಾಗಿದ್ದು, ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಅ. 19ರಂದು ಶನಿವಾರ ಬೆಳಿಗ್ಗೆ ಗಂಟೆ 8.30ರಿಂದ ರಾತ್ರಿ ಗಂಟೆ 10.30 ರತನಕ ಕಂಬಳ ಕೂಟ ನಡೆಯಲಿದೆ ಎಂದು ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಸುರೇಶ ಶೆಟ್ಟಿ ಅವರು ತಿಳಿಸಿದರು.
ಪೂಂಜ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ ಆಚಾರ್ಯ ಇವರು ಕರೆ ಉದ್ಘಾಟಿಸಲಿದ್ದು, ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೊ. ವಿಕ್ರಮ್ ದತ್ತ ಇವರು ದೀಪ ಪ್ರಜ್ವಲನೆ ಮೂಲಕ ಕಂಬಳ ಕೂಟಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ರೊ.ಎನ್.ಪ್ರಕಾಶ ಕಾರಂತ್, 2026-27ನೇ ಸಾಲಿನ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ರೋಟರಿ ಜಿಲ್ಲಾ ಕಾರ್ಯದರ್ಶಿ ರೊ.ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಡಾ.ಮುರಳಿಕೃಷ್ಣ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ವಲಯ ಸೇನಾನಿ ರೊ. ಗಣೇಶ ಶೆಟ್ಟಿ ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು ಮತ್ತಿತರ ಪದಾಧಿಕಾರಿಗಳು ಹಾಗೂ ಕಂಬಳ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೋಟರಿ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕರಾವಳಿ ಜಾನಪದ ಕ್ರೀಡೆ ಕಂಬಳ ಕೂಟದಲ್ಲಿ ಗುಣಮಟ್ಟದ ಮತ್ತಷ್ಟು ಓಟದ ಕೋಣಗಳ ಸಂಖ್ಯೆ ಹೆಚ್ಚಿಸುವಲ್ಲಿ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ ‘ಕಂಬಳ ಕೂಟ’ ಆಯೋಜಿಸುತ್ತಿದೆ. ರೋಟರಿ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಂಬಳ ಕೂಟವನ್ನು ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ವತಿಯಿಂದ ಆಯೋಜಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳ ಕೂಟಗಳಲ್ಲಿ ಸಬ್ ಜ್ಯೂನಿಯರ್ ವಿಭಾಗದ ಕೋಣಗಳಿಗೆ ಸ್ಪರ್ಧೆ ಯ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂಬ ಅಂಶವನ್ನು ಮನಗಂಡು ಸ್ವತಃ ಓಟದ ಕೋಣಗಳ ಮಾಲೀಕರಾದ ರೊ.ಅವಿಲ್ ಮಿನೇಜಸ್ ಇವರ ನೇತೃತ್ವದಲ್ಲಿ ಈ ವಿನೂತನ ಕಂಬಳ ಕೂಟ ಆಯೋಜನೆಗೊಂಡಿದೆ. ಸಬ್ ಜ್ಯೂನಿಯರ್ ವಿಭಾಗದ ಓಟದ ಕೋಣಗಳಿಗೆ ಸ್ಪರ್ಧೆಗಳಿಗೆ ಅವಕಾಶ ನೀಡಿದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳನ್ನು ಸಾಕುವುದರ ಜೊತೆಗೆ ಸಾಂಪ್ರ‍್ರದಾಯಿಕ ಮತ್ತು ಸಾವಯವ ಕೃಷಿಗೆ ಬೆಂಬಲ ನೀಡುವ ಉದ್ದೇಶದಿಂದ ಕೂಡಾ ರೋಟರಿ ಕ್ಲಬ್ ಈ ಕಂಬಳ ಕೂಟವನ್ನು ಆಯೋಜಿಸಿದೆ.

ಸಬ್ ಜ್ಯೂನಿಯರ್ ವಿಭಾಗದ ಕಂಬಳ ಕೂಟದಲ್ಲಿ ವಿಜೇತ ಕೋಣಗಳ ಮಾಲೀಕರಿಗೆ ಪ್ರಥಮ ಬಾರಿಗೆ ಚಿನ್ನದ ಪದಕ ನೀಡುವ ಮೂಲಕ ಗಮನ ಸೆಳೆಯುವ ಕಂಬಳ ಕೂಟವಾಗಿದೆ. ಈ ಕಂಬಳಕೂಟದಲ್ಲಿ ಭಾಗವಹಿಸುವ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕೂಡ ಕ್ಲಬ್ಬಿನ ವತಿಯಿಂದಲೇ ವ್ಯವಸ್ಥೆ ಮಾಡಲಾಗಿದೆ ಎಂದು ಕಂಬಳದ ವಿಶೇಷತೆ ಬಗ್ಗೆ ವಿವರ ನೀಡಿದರು..

ಸಬ್ ಜ್ಯೂನಿಯರ್ ಹಗ್ಗದ ವಿಭಾಗದಲ್ಲಿ ಪ್ರಥಮ ಬಹುಮಾನ-ಅರ್ಧ ಪವನ್ ಚಿನ್ನದ ಪದಕ, ದ್ವಿತೀಯ ಬಹುಮಾನ- ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ತಲಾ ರೂ 5 ಸಾವಿರದಂತೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ ಪ್ರಥಮ ಬಹುಮಾನ-ಅರ್ಧ ಪವನ್ ಚಿನ್ನದ ಪದಕ, ದ್ವಿತೀಯ ಬಹುಮಾನ- ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ತಲಾ ರೂ 5 ಸಾವಿರದಂತೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

ಎಲ್ಲಾ ವಿಭಾಗದ ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟಗಾರರಿಗೆ ವಿಶೇಷ ಟ್ರೋಫಿ ಬಹುಮಾನ ನೀಡಿ ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ರೊ.ಅವಿಲ್ ಮಿನೇಜಸ್, ಕಾರ್ಯದರ್ಶಿ ರೊ.ರಾಜೇಶ ಶೆಟ್ಟಿ ಸೀತಾಳ ,ರೋ.ಮೋಹನ್ ಶ್ರಿಯಾನ್ ಉಪಸ್ಥಿತರಿದ್ದರು..