Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅಡ್ಯನಡ್ಕದಲ್ಲಿ ರಂಜಿಸಿದ ಸ್ಯಾಕ್ಸೋಫೋನ್ ಜೊತೆ ಭಕ್ತಿ ಗಾನ ರಸಮಂಜರಿ-ಕಹಳೆ ನ್ಯೂಸ್

ಪೆರ್ನಾಜೆ : ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ (ರಿ) ಅಡ್ಯನಡ್ಕದಲ್ಲಿ 35ನೇ ವರ್ಷದ ನವರಾತ್ರಿ ಮತ್ತು ಶ್ರೀ ಶಾರದೋತ್ಸವ ಪ್ರಯುಕ್ತ ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಪಡಿನಾಗಿಲು ಶಿಕ್ಷಕಿ ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳು ವಿದ್ವಾನ್ ಉದಯ ಕಾಸರಗೋಡು ಸ್ಯಾಕ್ಸೋಫೋನ್ ಜೊತೆ ಭಕ್ತಿ ಗಾನ ರಸಮಂಜರಿ. ದ್ವಂದ್ವ ವಿಶೇಷ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕು.ಸಿಂಚನ ಲಕ್ಷ್ಮಿ ಕೋಡಂದೂರ್ ಪ್ರಾರ್ಥನೆಯೊಂದಿಗೆ , ಪಕ್ಕ ವಾದ್ಯದಲ್ಲಿ ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು , ಕೀಬೋರ್ಡ್ ವಾದನದಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು. ರಘುರಾಮ ಶಾಸ್ತ್ರಿ ಕೋಡಂದೂರು ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು, ಅಧ್ಯಕ್ಷರು ಆನಂದ್ ಕುಲಾಲ್ ಪಂಜಿ ಕಲ್ಲು, ಉಪಾಧ್ಯಕ್ಷರು ನಾರಾಯಣ ಕoಜಿಮೂಲೆ, ಭಜನಾ ಸಂಚಾಲಕರು ಪಿ ಮೋಹನ ಟೈಲರ್, ಪ್ರಧಾನ ಕಾರ್ಯದರ್ಶಿ ಸುಧಾಮ ಅಮೈ ಯತೀಶ್ ಚವರ್ಕಾಡ್ ,ಕೋಶಾಧಿಕಾರಿ ಬಾಲಕೃಷ್ಣ ಕುಲಾಲ್ ಅಡ್ಯನಡ್ಕ ಹಾಗೂ ಮಂಡಳಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು ಪದ್ಮರಾಜ ಚಾರ್ವಾಕ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು