Saturday, November 16, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ :ಕಾರಣೀಕ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಹೊಸ ಅಕ್ಕಿ ( ಪುದ್ದಾರ್ ) ಅಗೆಲು ಸೇವೆ-ಕಹಳೆ ನ್ಯೂಸ್

ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಅ.17 ರಂದು ಗುರುವಾರ ಮಧ್ಯಾಹ್ನ ಹೊಸ ಅಕ್ಕಿ ( ಪುದ್ದಾರ್ ) ಅಗೆಲು ಸೇವೆ ನಡೆಯಿತು.
ಪ್ರತಿ ವರ್ಷ ಕಾವೇರಿ ಸಂಕ್ರಮಣದAದು ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೆಲು ಸೇವೆ ನೆಡೆಯುತ್ತದೆ. ಊರ ಪರ ಊರ ಭಕ್ತರು ಪುದ್ದಾರ್ ಅಗೆಲು ಸೇವೆಗೆ ವಿವಿಧ ಬಗೆಯ ತರಕಾರಿಗಳನ್ನು ನೀಡುತ್ತಾರೆ. ಈ ದಿನ ಅಗೆಲು ಸೇವೆಯಲ್ಲಿ ತರಕಾರಿಗಳನ್ನು ಬಿಡಿಸುವುದು ವಿಶೇಷವಾಗಿದೆ.

ಇಲ್ಲಿ ಇತರೆ ದಿನಗಳಲ್ಲಿ ನಡೆಯುವ ಅಗೆಲು ಸೇವೆಯಂತೆ ದೈವಕ್ಕೆ ಅಗೆಲು ಸೇವೆ ಈ ಕಾವೇರಿ ಸಂಕ್ರಮಣದ ದಿನದಂದು ನಡೆಯುತ್ತದೆ. ಅಗೆಲು ಬಡಿಸಲು ಹೊಸ ಅಕ್ಕಿಯನ್ನು ಉಪಯೋಗಿಸಲಾಗುತ್ತದೆ( ಈ ವರ್ಷದ ಬೆಳೆಯಾದ ಊಟದ ಅಕ್ಕಿಯನ್ನು ಅಗೆಲು ಸೇವೆಗೆ ಉಪಯೋಗಿಸುವ ಕ್ರಮಕ್ಕೆ ತುಳುವಿನಲ್ಲಿ ಪುದ್ದಾರ್ ಎಂದು ಹೇಳಲಾಗುತ್ತದೆ) ಇದರ ಜೊತೆ ಭಕ್ತರು ನೀಡಿದ ತರಕಾರಿಗಳನ್ನು ಅಗೆಲು ಜೊತೆ ಸೇರಿಸಿ ಬಡಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೇರಿ ಸಂಕ್ರಮಣ ಸೋಮವಾರ ಅಥವ ಶನಿವಾರ ಬಂದಲ್ಲಿ ದೈವಕ್ಕೆ ಅಗೆಲು ಸೇವೆ ಮಾಡುವುದಿಲ್ಲ , ಇದರ ಬದಲಾಗಿ ಮುಂದಿನ ದಿನ ಅಥವಾ ಮರುದಿನ ಹೊಸ ಅಕ್ಕಿ ಅಗೆಲು ಬಡಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಣೋಲಿಬೈಲು ಕ್ಷೇತ್ರದಲ್ಲಿ ಆದಿತ್ಯವಾರ,ಮಂಗಳವಾರ ಮತ್ತು ಶುಕ್ರವಾರ ಅಗೆಲು ನಡೆಯುತ್ತದೆ. ಕಾವೇರಿ ಸಂಕ್ರಮಣ ವಾರದ ಮಧ್ಯೆ ಅಂದರೆ ಅಗೆಲು ನಡೆಯುವ ದಿನಗಳಲ್ಲದ ದಿನದಲ್ಲಿ ಬಂದಾಗ ವಿಶೇಷವಾಗಿರುತ್ತದೆ. ಹಾಗಾಗಿ ಈ ದಿನ ಭಕ್ತರ ಸಂಖ್ಯೆ ಅಪಾರವಾಗಿತ್ತು.

1249 ಅಗೆಲು ಸೇವೆಯನ್ನು ಭಕ್ತರು ಕಾವೇರಿ ಸಂಕ್ರಮಣದ ಪುದ್ದಾರ್ ಸೇವೆಗೆ ನೀಡಿದ್ದಾರೆ. ಪಣೋಲಿಬೈಲು ಕ್ಷೇತ್ರದ ಒಂದನೇ ಅರ್ಚಕ ವಾಸು ಮೂಲ್ಯ,ಎರಡನೇ ಅರ್ಚಕ ನಾರಾಯಣ ಮೂಲ್ಯ,ಮೂರನೇ ಅರ್ಚಕ ಮೋನಪ್ಪ ಮೂಲ್ಯ , ಕಾರ್ಯನಿರ್ವಾಹಣಾಧಿಕಾರಿ ದಿವಾಕರ, ದೈವದ ಚಾಕರಿಯವರಾದ ರಮೇಶ್ ಕುಲಾಲ್ ಪಣೋಲಿಬೈಲು, ಭಂಡಾರದ ಮನೆಯ ನವೀನ್ ಕುಲಾಲ್ ಮತ್ತು ಜಯರಾಮ್ ಶೆಟ್ಟಿ ನಗ್ರಿಗುತ್ತು ಹಾಗೂ ದೈವದ ಚಾಕರಿಯವರು,ಸಿಬ್ಬಂದಿಗಳು ಹಾಗೂ ಊರಪರ ಊರಭಕ್ತರು ವಿಶೇಷ ದಿನದ ಪುದ್ದಾರ್ ಸೇವೆಯಲ್ಲಿ ಹಾಜರಿದ್ದರು.