Recent Posts

Sunday, January 19, 2025
ಸುದ್ದಿ

ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರವಿರಲಿ: ಸಿಎಂ ಮನವಿ – ಕಹಳೆ ನ್ಯೂಸ್

ಬೆಂಗಳೂರು: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ದೀಪಾವಳಿ ಹಬ್ಬ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡ ಪ್ರಕರಣಗಳು ನನ್ನಲ್ಲಿ ಆತಂಕ ಮತ್ತು ತೀವ್ರ ನೋವನ್ನು ಉಂಟು ಮಾಡಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ದಯವಿಟ್ಟು ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರವಿರಲಿ, ಸಾಧ್ಯವಾದಷ್ಟು ಹಣತೆ ಹಚ್ಚಿ ಬೆಳಕು ಹರಡುವ ದೀಪಾವಳಿ ಆಚರಿಸಿ, ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ದಯವಿಟ್ಟು ಪಾಲಿಸಿ ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು