ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಬಳಿ ತನಿಖೆಯ ಕಂಪೀಟ್ ಡೀಟೇಲ್ಸ್ ನೀಡಲು ಪತ್ರದ ಮೂಲಕ ಮಹಿಳಾ ಆಯೋಗ ಮನವಿ ಮಾಡಿದೆ.
ಶೃತಿ ಹರಿಹರನ್ ಗೆ ಆಗಿರುವ ಸಮಸ್ಯೆ ಬಗ್ಗೆ ಆಯೋಗ ಪರಿಶೀಲನೆ ನಡೆಸಿದ್ದು, ಶೃತಿ ಹರಿಹರನ್ ಖುದ್ದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ಕರೆ ಮಾಡಿ ಮೌಖಿಕ ಹೇಳಿಕೆ ಹಾಗೂ ಲಿಖಿತ ಹೇಳಿಕೆ ಕೊಡುವಂತೆ ಸೂಚಿಸಿದ್ದಾರೆ.
ಇನ್ನು ಶೃತಿ ಹರಿಹರನ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಿಳಿಸಿದ್ದು, ಮತ್ತೊಂದು ಆಯೋಗದಿಂದ ನೋಟಿಸ್ ನೀಡಲು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.