Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಆಡಿಯೋ ವೈರಲ್..!! ಹಿಂದೂ ಸಂಘಟನೆಗಳು ರೆಬೆಲ್..!! ಮಧ್ಯಾಹ್ನ ಅಂದರ್..!! ಸಂಜೆ ಬಾಹರ್..!! – ಕಹಳೆ ನ್ಯೂಸ್

ಪುತ್ತೂರು: ಬಿಲ್ಲವ ಹೆಣ್ಣು ಮಕ್ಕಳನ್ನು ಹಾಗೂ ಭಜನೆ ಸಂಕೀರ್ತನೆ ಮಾಡುವವರನ್ನು ನಿಂದಿಸಿರುವ ಆರೋಪದಡಿ ಇಂದು ಮಧ್ಯಾಹ್ನ ಬಂದಿತರಾಗಿದ್ದ ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರಿಗೆ ಇಂದು ಸಂಜೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.

ಮೂರು ದಿನಗಳ ಹಿಂದೆ ಸಂಜೀವ ಪೂಜಾರಿಯವರು ಕೇರಳ ರಾಜ್ಯದ ಮಂಜೇಶ್ವರದ ವ್ಯಕ್ತಿಯೊಬ್ಬರ ಜತೆ ಆಡಿದರೆನ್ನಲಾದ ಫೋನ್ ಸಂಭಾಷಣೆಯ ಆಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆಡಿಯೋದಲ್ಲಿ ಸಂಜೀವ ಪೂಜಾರಿಯವರು ಬಿಲ್ಲವ ಸಮುದಾಯದ ಮಹಿಳೆಯರನ್ನು ಹಾಗೂ ಭಜನ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ದ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದು ಜಾಗರಣಾ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಎಂಬವರು ಬೆಳ್ಳಾರೆ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು . ದೂರು ಸ್ವೀಕರಿಸಿದ ಪೊಲೀಸರು ಎರಡು ದಿನದ ಬಳಿಕ ಗುರುವಾರ ಸಂಜೆ ಪ್ರಕರಣ ದಾಖಲಿಸಿದ್ದರು .

ಇಂದು ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಪುತ್ತೂರು ಡಿವೈಎಸ್ಪಿ ಕಛೇರಿ ಮುಂಭಾಗ, ಹಿಂದೂ ಜಾಗರಣೆ ವೇದಿಕೆ ನೇತ್ರತ್ವದಲ್ಲಿ ಸಂಘಪರಿವಾರದ ಅಂಗ ಸಂಸ್ಥೆಗಳು ಪ್ರತಿಭಟನೆ ನಡೆಸಿತ್ತು. ಅಲ್ಲದೇ ತಕ್ಷಣ ಬಂಧಿಸಬೇಕು ಎಂದು ಅಗ್ರಹಿಸಿ ಡಿವೈಎಸ್ಪಿ ಕಛೇರಿ ಮುಂಭಾಗ ಭಜನೆ ಹಾಡುವ ಮೂಲಕ ಪ್ರತಿಭಟನಕಾರರು ದರಣಿ ಸತ್ಯಾಗ್ರಹ ಕೂಡ ನಡೆಸಿದ್ದರು.

ಇದಾದ ಕೆಲವೇ ಗಂಟೆಗಳ ಬಳಿಕ ಕಾಣಿಯೂರಿನ ನಿವಾಸದಿಂದ ಬೆಳ್ಳಾರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಂಜೀವ ಪೂಜಾರಿಯವರನ್ನು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಈ ವೇಳೆ ಅವರಿಗೆ ಸುಳ್ಯದ ನ್ಯಾಯಾಲಯವಉ ಜಾಮೀನು ಮಂಜೂರು ಮಡಿದೆ ಎಂದು ತಿಳಿದು ಬಂದಿದೆ.

ಹಿಂದೂ ಜಾಗರಣಾ ವೇದಿಕೆ ಮಹತ್ವದ ಬೈಠಕ್..!!

ಸಂಜೀವ ಪೂಜಾರಿ ಮೇಲೆ FIR ಆಗಿತ್ತಾದರು. ಪ್ರಕರಣ ಆರೋಪಿ ಅಂದರ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಹಿಂದೂ ಜಾಗರಣಾ ವೇದಿಕೆ. ಇದೀಗ ಆತ ಜಾಮೀನು ಮೇಲೆ ಹೊರ ಬರುತ್ತಿದ್ದಂತೆ ಮಹತ್ವದ ಕಾರ್ಯಕರ್ತರ ಬೈಠಕ್ ನ್ನು ಪುತ್ತೂರಿನಲ್ಲಿ ನಡೆಸಲು ಚಿಂತನೆ ನಡೆಸಿದ್ದು, ನಾಳೆ ( 19.10.2024 ) ಸಂಜೆ 4.00 ಗಂಟೆಗೆ ನಡೆಯಲಿದೆ ಎನ್ನಲಾಗುತ್ತಿದ್ದು, ಮುಂದಿನ ಹೋರಾಟದ ಬಗ್ಗೆ ಮಹತ್ವದ ನಿರ್ಣಯಹೊರ ಬರಲಿದೆ ಎನ್ನಲಾಗುತ್ತಿದೆ.