Friday, November 15, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25ರಿಂದ ಮಾ.5ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕುರಿತು ಬಿಸಿರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಫೆ.25 ರಿಂದ ಮಾ.5ರವರೆಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ನಡೆಯುವ ನವದುರ್ಗಾ ಲೇಖನ ಯಜ್ಞದ ಅಂಗವಾಗಿ “ನವದುರ್ಗಾ ಲೇಖನ ಯಜ್ಞ” ಸಮಿತಿ ದ.ಕನ್ನಡ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಅ.19 ರಂದು ಶನಿವಾರ ಬಿಸಿರೋಡಿನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಯಿತು.

99 ಕೋಟಿ ವೆಚ್ಚದಲ್ಲಿ ಕಾಪು ಶ್ರೀ ಹೊಸಮಾರಿ ಗುಡಿ ದೇವಸ್ಥಾನ ನಿರ್ಮಾಣವಾಗುತ್ತಿದೆ ದಕ್ಷಿಣ ಭಾರತದ ಬಹುದೊಡ್ಡ ಶಿಲಾಮಯ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ಹಿಂದೂಸಮಾಜವನ್ನು ಒಂದುಗೂಡಿಸಿ ಕಾರ್ಯಕ್ರಮದ ಜೊತೆಗೆ ಜೋಡಿಸುವುದು, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಲೋಕಲ್ಯಾರ್ಥವಾಗಿ ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

99,999 ಭಕ್ತರು ಸೇರಿಕೊಂಡು 9 ದಿನಗಳ ಕಾಲ ವನದುರ್ಗೆಯರ ಹೆಸರನ್ನು ದಿನಕ್ಕೆ 9 ರಂತೆ 9 ದಿನಗಳ ಬರೆದು ದಿನಕ್ಕೆ ಒಂದು ಮುಷ್ಟಿ ಅಕ್ಕಿಯನ್ನು ಒಂಬತ್ತು ದಿನಗಳ ಕಾಲ ಹಾಕಿದ ಅಕ್ಕಿಯನ್ನು ಕ್ಷೇತ್ರಕ್ಕೆ ಸಮರ್ಪಣೆ ಮಾಡಬೇಕು ಎಂದು ಅವರು ತಿಳಿಸಿದರು. ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವ ದೃಷ್ಟಿಯಿಂದ ಸಭೆಯನ್ನು ಏರ್ಪಡಿಸಲಾಗಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ತಿಳಿಸಿದರು. ಬಳಿಕ ಈ ಕಾರ್ಯಕ್ರಮ ಯೋಜನೆಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮುಖ್ಯ ಸಂಚಾಲಕ ಪುರುಷೋತ್ತಮ ಭಂಡಾರಿ, ಜಿಲ್ಲಾ ಸಂಚಾಲಕರಾದ ಮನೀಶ್ ರೈ,ಕೃಷ್ಣ ಶೆಟ್ಟಿ ತಾರೆಮಾರ್,ಅಶ್ವಥಾಮ ಹೆಗ್ಡೆ ,ಪ್ರದೀಪ್ ಆಳ್ಚ ಕದ್ರಿ ಸಂತೋಷ ಶೆಟ್ಟಿ ಶೆಡ್ಯ, ಅಶ್ವಥ್ ಸುವರ್ಣ,ಬಾಲಕೃಷ್ಣ ಕೊಟ್ಟಾರಿ,ಬಂಟ್ವಾಳ ಸಮಿತಿ ಸಂಚಾಲಕರಾದ ಮನಿಮಾಳ ಶೆಟ್ಟಿ ,ತಾರಾನಾಥ ಕೊಟ್ಟಾರಿ ಹಾಗೂ ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.