Sunday, January 19, 2025
ದಕ್ಷಿಣ ಕನ್ನಡಪುತ್ತೂರುಯಕ್ಷಗಾನ / ಕಲೆಸುದ್ದಿ

ನ.20ರಂದು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿಯ 2024-25ನೇ ಸಾಲಿನ ಕಲಾ ತಿರುಗಾಟ ಆರಂಭ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿಯ 2024-25ನೇ ಸಾಲಿನ ಕಲಾ ತಿರುಗಾಟವು ನ.20ರಂದು ಆರಂಭವಾಗಲಿದೆ.

ಶ್ರೀ ವಾಸುದೇವ ರಂಗಾಭಟ್ ಮಧೂರು ಕಥಾ ಸಂಯೋಜನೆಯ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಈ ವರ್ಷದ ನೂತನ “ಸಾಕೇತ ಸಾಮ್ರಾಜ್ಞೆ” ಪೌರಾಣಿಕ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ವಿದೂಷಕರಾಗಿ ಶ್ರೀ ಸೀತಾರಾಮ್ ಕುಮಾರ್ ಕಟೀಲ್,ಶ್ರೀ ಮುಚೂರು ಮೋಹನ್ .  ಚೆಂಡೆ & ಮದ್ದಳೆಯಲ್ಲಿ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, , ಶ್ರೀ ಚೈತನ್ಯಕೃಷ್ಣ ಪದ್ಯಾಣ, ಶ್ರೀ ಶ್ರೀಧರ ವಿಟ್ಲ, ಹಾಗೂ ಶ್ರೀ ಕೌಶಲ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ಶ್ರೀ ನಿಶ್ವತ್ ಜೋಗಿ ಜೋಡುಕಲ್ಲು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸ್ತ್ರೀ ಪಾತ್ರದಲ್ಲಿ ಶ್ರೀ ಸಂತೋಷ್ ಹಿಲಿಯಾಣ, ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ, ಶ್ರೀ ಸತೀಶ್ ನೀರ್ಕೆರೆ, ಶ್ರೀ ಮಹೇಶ್ ಎಡನೀರು ರಂಗವೈಭವ ಅಲಂಕರಿಸಲಿದ್ದು, ಪ್ರಧಾನ ಭೂಮಿಕೆಯಲ್ಲಿ ಕಲಾವಿದರಾಗಿ ವಾಸುದೇವ ರಂಗಾಭಟ್ ಮಧೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಪೆರ್ಲ ಜಗನ್ನಾಥ ಶೆಟ್ಟಿ, ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಜಗದಾಭಿರಾಮ ಪಡುಬಿದ್ರಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪ್ರಸಾದ್ ಸವಣೂರು, ಶಿವರಾಜ್ ಬಜಕೂಡ್ಡು, ಮುಖೇಶ್ ದೇವಧರ್ ನಿಡ್ಲೆ, ಅಜಿತ್ ಪುತ್ತಿಗೆ, ಪೃಥ್ವಿಶ್ ಬೆದ್ರ, ಅಭಿಷೇಕ್ ಕಲ್ಲಡ್ಕ, ಕೀರ್ತನ್ ಕಾರ್ಕಳ, ಸತೀಶ್ ಎಡಮೊಗೆ, ರೂಪೇಶ್ ಆಚಾರ್ಯ ಹಾಗೂ ಅತಿಥಿ ಕಲಾವಿದರಾಗಿ ಶ್ರೀ ಉಬರಡ್ಕ ಉಮೇಶ್ ಶೆಟ್ಟಿ, ಶ್ರೀ ಶಶಿಧರ ಕುಲಾಲ್ ಕನ್ಯಾನ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇದರ ಪ್ರದರ್ಶನವನ್ನು ಆಯೋಜಿಸಲು ಆಸಕ್ತರಾದ ಸಂಘಟಕರು ಅಥವಾ ಸಂಘ ಸಂಸ್ಥೆಗಳ ಪ್ರಮುಖರು ದೂರವಾಣಿ ಮೂಲಕ ಸಂಪರ್ಕಿಸಿ ನೀವು ಅಪೇಕ್ಷಿಸುವ ದಿನಾಂಕವನ್ನು ಪ್ರದರ್ಶನಕ್ಕಾಗಿ ಕಾಯ್ದಿರಿಸಿಕೊಳ್ಳಲು ಹನುಮಗಿರಿ ಮೇಳದ ಪ್ರಬಂಧಕರಾದ ಹರೀಶ್ ಭಟ್ ಬಳಂತಿಮುಗರು (9480574353, 9480643157) ಸಂಪರ್ಕಿಸಿ.

ವಿ.ಸೂ.: ಹನುಮಗಿರಿ ಮೇಳದ ಪ್ರದರ್ಶನವು ಕಾಲಮಿತಿಗೆ ಸಂಜೆ ಗಂಟೆ 6.30ರಿಂದಲೂ ಪೂರ್ಣ ರಾತ್ರಿಗೆ 9.30ರಿಂದ ಮಾತ್ರವೇ ಆರಂಭವಾಗಲಿದೆ ಎಂದು ಶ್ರೀಕ್ಷೇತ್ರ ಹನುಮಗಿರಿ ಮತ್ತು ಶ್ರೀ ಹನುಮಗಿರಿ ಮೇಳದ ಆಡಳಿತ ಮಂಡಳಿ ವಿನಂತಿಸಿಕೊಂಡಿದ್ದಾರೆ.