Sunday, January 19, 2025
ಸುದ್ದಿ

ಪ್ರಧಾನಿ ನೋಟು ಅಮಾನ್ಯಗೊಳಿಸಿದ ನಿರ್ಧಾರಕ್ಕೆ ಎರಡು ವರ್ಷ ಪೂರ್ಣ – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಹಣಕಾಸು ವ್ಯವಸ್ಥೆಯಲ್ಲಿದ್ದ ಶೇಕಡ 86 ರಷ್ಟು ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇದರ ಕರಾಳ ಛಾಯೆ ಇಂದಿಗೂ ಕಂಡುಬರುತ್ತಿದೆ.

ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಕೃಷಿ ವೇತನ ಗಣನೀಯವಾಗಿ ಕಡಿಮೆಯಾಗಿದ್ದು, ಇನ್ನೊಂದೆಡೆ ರೈತರು ತಮ್ಮ ಉತ್ಪನ್ನಗಳಿಗೆ ಆಕರ್ಷಕ ಬೆಲೆ ಪಡೆಯುವ ನಿಟ್ಟಿನಲ್ಲಿ ಚೌಕಾಶಿ ಶಕ್ತಿ ಕುಸಿದಿರುವುದು ನೋಟು ಅಮಾನ್ಯ ನಿರ್ಧಾರದ ಪ್ರಮುಖ ಎರಡು ಪರಿಣಾಮಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಗ್ರಾಮೀಣ ಭಾರತದ ಹಲವು ಕಡೆಗಳಲ್ಲಿ ಸಂಕಷ್ಟದ ಪರಿಸ್ಥಿತಿ ಮುಂದುವರಿಯಲು ಕಾರಣವಾಗಿದೆ. ಗ್ರಾಮೀಣ ರೈತರು ಮತ್ತು ಕಾರ್ಮಿಕರಲ್ಲಿ ಈ ಬಗ್ಗೆ ದಟ್ಟ ಅಸಮಾಧಾನವಿದೆ.

ಕೃಷಿ ಮತ್ತು ಕೃಷಿಯೇತರ ಆದಾಯ ಹಾಗೂ ಗ್ರಾಮೀಣ ಮತ್ತು ನಗರ ಆಹಾರ ಹಣದುಬ್ಬರ ಬಗೆಗಿನ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತವೆ. ಉದ್ಯೋಗ ಖಾತ್ರಿ ಯೋಜನೆ ಮತ್ತು ಕೃಷಿಕ್ಷೇತ್ರದಲ್ಲಿ ಉನ್ನತ ಪ್ರಗತಿ ಕಾರಣದಿಂದ ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಕೃಷಿ ಹಾಗೂ ಕೃಷಿಯೇತರ ಗ್ರಾಮೀಣ ವೇತನದ ಅನುಪಾತದಲ್ಲಿ ಹೆಚ್ಚಳ ಕಂಡುಬಂದಿತ್ತು.