Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸೋಮವಾರ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಇಂದು ಬಂಟ್ವಾಳ ತಾಲೂಕಿನ ಮೊಡಂಕಾಪು ಶಾಲೆಯಲ್ಲಿ ಪೂರ್ವತಯಾರಿ-ಕಹಳೆ ನ್ಯೂಸ್

ಬಂಟ್ವಾಳ: ಅ.21 ರಂದು ಸೋಮವಾರ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಇಂದು ಬಂಟ್ವಾಳ ತಾಲೂಕಿನ ಮೊಡಂಕಾಪು ಶಾಲೆಯಲ್ಲಿ ಮಸ್ಟರಿಂಗ್ ( ಪೂರ್ವತಯಾರಿ) ಕಾರ್ಯ ನಡೆಯಿತು.

ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮೊಡಂಕಾಪು ಮಸ್ಟರಿಂಗ್ ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ,ಬಳಿಕ ತಾಲೂಕು ತಹಶಿಲ್ದಾರ್ ಅರ್ಚನಾ ಭಟ್ ಅವರಲ್ಲಿ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ರಾಮಕೃಷ್ಣ, ಹರೀಶ್, ಸುತೇಶ್, ಸಂಜೀವ,ಉಪತಹಶೀಲ್ದಾರ್ ಗಳಾದ ನವೀನ್ ಬೆಂಜನಪದವು, ನರೇಂದ್ರ ಭಟ್, ಕಂದಾಯ ನಿರೀಕ್ಷಕ ಜನಾರ್ಧನ,ವಿಜಯ್, ಪ್ರಶಾಂತ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮತದಾನ ಎಲ್ಲಿ, ಮತದಾರರೆಷ್ಟು?
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 795 ಮತದಾರರಿದ್ದು,ಅದರಲ್ಲಿ 381 ಗಂಡು,414 ಹೆಣ್ಣು ಮತದಾರರಿದ್ದಾರೆ. 51 ಗ್ರಾಮಪಂಚಾಯತ್ ಗಳಲ್ಲಿ , ಒಂದು ಪುರಸಭೆ ( ಬಂಟ್ವಾಳ) ಒಂದು ಪಟ್ಟಣಪಂಚಾಯತ್ (ವಿಟ್ಲ) ಹೀಗೆ ಒಟ್ಟು 53 ಕೇಂದ್ರಗಳಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊAಡು ಸಂಜೆ 4 ರ ತನಕ ಮತದಾನ ನಡೆಯಲಿದೆ.

53 ಕಡೆಗಳಲ್ಲಿ ನಡೆಯುವ ಮತದಾನ ಕೇಂದ್ರಗಳಿಗೆ ಒಟ್ಟು 6 ಸೆಕ್ಟರ್ ಅಧಿಕಾರಿಗಳನ್ನು 53 ಪಿ.ಆರ್.ಒ, 53 ಎಪಿಆರ್ ಒ, 53 ಪಿ.ಒ ಅಧಿಕಾರಿಗಳನ್ನು ಹಾಗೂ 53 ಡಿ.ಗ್ರೂಪ್ ನೌಕರರು ಸೇರಿದಂತೆ ಒಟ್ಟು 216 ಸಿಬ್ಬಂದಿಗಳನ್ನು ಮತ್ತು 5 ಮೈಕ್ರೋ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶಿಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆಯಿAದ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು, ನಾಳೆ ಸಂಜೆ ಇದೇ ಶಾಲೆಯಲ್ಲಿ 4.30 ರಿಂದ ಡಿ.ಮಸ್ಟರಿಂಗ್ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ