Recent Posts

Thursday, November 21, 2024
ಕಡಬದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಇದರ ವತಿಯಿಂದ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಪ್ರಾರಂಭ – ಕಹಳೆ ನ್ಯೂಸ್

ಕಡಬ : ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಇದರ ವತಿಯಿಂದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇಲ್ಲಿನ ಸಭಾಂಗಣದಲ್ಲಿ ಧಾರ್ಮಿಕ ಶಿಕ್ಷಣ ತರಗತಿಯನ್ನು ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಕ್ ಹಾಗೂ ಪುತ್ತೂರು ಶ್ರೀಮಹೋತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೇಶವಪ್ರಸಾದ್ ಮುಳಿಯ ಹಾಗೂ ಮುರಳಿಕೃಷ್ಣ ಹಸಂತಡ್ಕ ಇವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತೀ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ದೀಪ ಪ್ರಜ್ವಲನೆಗೊಳಿಸಿ ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 100ಕ್ಕೂ ಮಿಕ್ಕಿ ನೋಂದಾಯಿತ ವಿದ್ಯಾರ್ಥಿಗಳಿಗೆ ತರಗತಿ ನಡೆಸಿ ಮಾಹಿತಿಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತೀ ವೀಣಾ ಬಾಲಕೃಷ್ಣರವರು ಧಾರ್ಮಿಕ ಶಿಕ್ಷಣದ ಮಾಹಿತಿ ಹಾಗೂ ತಮ್ಮ ಕೇಂದ್ರದ ಮುಖೇನ ಬಿಡುಗಡೆಗೊಳಿಸಿರುವ ಧಾರ್ಮಿಕ ಪಠ್ಯಪುಸ್ತಕ ಕುರಿತಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಇದರ ಸಂಚಾಲಕರಾದ ವಸಂತ ನಡುಬೈಲು , ಗೌರವಾಧ್ಯಕ್ಷರಾದ ಐತ್ತಪ್ಪ ಅಲೆಕ್ಕಾಡಿ ಮತ್ತು ವಸಂತ ಹುದೇರಿ , ಅಧ್ಯಕ್ಷರಾದ ಧ್ರುವಕುಮಾರ್ ಕೇರ್ಪಡ , ಶ್ರೀ ಕೇತ್ರ ಕೇರ್ಪಡದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪರಾಜ ರೈ , ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ ಸುಹಾಸ್ ಅಲೆಕ್ಕಾಡಿ , ನಿಂತಿಕಲ್ಲು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಪದ್ಮನಾಭ ಪೂದೆ , ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು , ಪೋಷಕರು ಉಪಸ್ಥಿತರಿದ್ದರು.