Recent Posts

Monday, January 20, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕುದ್ರೋಳಿಯಲ್ಲಿ ಅರಣ್ಯ ಅಧಿಕಾರಿ ಸಂಜೀವನ ವಿರುದ್ಧ ಸಾಮೂಹಿಕ ಪ್ರಾರ್ಥನೆ-ಕಹಳೆ ನ್ಯೂಸ್

ಮಂಗಳೂರು:’ ಬಿಲ್ಲವ ಹೆಣ್ಣು ಮಕ್ಕಳು ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ಬಗ್ಗೆ ಅತ್ಯಂತ ಕೆಟ್ಟ ಪದಗಳಲ್ಲಿ ನಿಂದನೆ ಮಾಡಿದ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರು ವಿರುದ್ದ, ಅ.21ರ0ದು ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿ, ಮಂಗಳೂರು ಇಲ್ಲಿ ಆತನಿಗೆ ಕಠಿಣ ಶಿಕ್ಷೆ ನೀಡುವಂತೆ, ಕ್ಷೇತ್ರಕ್ಕೆ ಬಂದು ಕ್ಷಮೆ ಕೇಳುವಂತೆ ದೇವರು ಮತ್ತು ಗುರುಗಳ ಪಾದ ಕಮಲಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಿಂದು ಜಾಗರಣ ಮಂಗಳೂರು ಮಹಾ ನಗರದ ವತಿಯಿಂದ ನೆರವೇರಿಸಲಾಯಿತು.
ಈ ಸಂದರ್ಭ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ಲಿಖಿತ್ ರಾಜ್ ಮೂಡುಶೆಡ್ಡೆ, ಸಹ ಸಂಯೋಜಕರುಗಳಾದ ಗಣೇಶ್ ಕೆದಿಲ, ನವೀನ್ ಮಂಗಳಾದೇವಿ, ಕಾರ್ಯಕಾರಣಿ ಸದಸ್ಯರುಗಳಾದ ಹರ್ಷಿತ್ ಶಕ್ತಿನಗರ, ಪ್ರಜ್ವಲ್ ಶಕ್ತಿನಗರ, ಸುಷಿತ್ ಬೋಳಾರ, ಹೇಮಂತೇಶ್ ಗೌಡ, ಸುವಿನ್ ಶೆಟ್ಟಿ , ಸುರತ್ಕಲ್ ನಗರ ಸಂಯೋಜಕರಾದ ಕಿರಣ್ ಜನತಾ ಕಾಲನಿ, ಶಕ್ತಿನಗರ ಮುಖಂಡರು ಮಣಿ ಶಕ್ತಿನಗರ, ಪ್ರಕೇಶ್ ಶಕ್ತಿನಗರ, ಪ್ರವೀಣ್ ಮತ್ತು ಸಂಘ ಪರಿವಾರದ ಮುಖಂಡರು, ಭಜನಾ ಸಮಿತಿ, ವಿವಿಧ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು..

ಜಾಹೀರಾತು

ಜಾಹೀರಾತು
ಜಾಹೀರಾತು