Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕರಾಟೆ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿ ನಿಕ್ಷೇಪ್‌ಕೃಷ್ಣ ಆಯ್ಕೆ-ಕಹಳೆ ನ್ಯೂಸ್

ಪುತತೂರು : ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾಣ ಸಂಸ್ಥಾನ ಇವರ ಸಹಯೋಗದಲ್ಲಿ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯಲ್ಲಿ 19ರ ವಯೋಮಿತಿಯಲ್ಲಿ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ ನರೇಂದ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ನಿಕ್ಷೇಪ್ ಕೃಷ್ಣ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ದೆಹಲಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾಗೆ ಆಯ್ಕೆಯಾಗಿರುತ್ತಾರೆ.

ಇವರು ಸಂಪ್ಯದ ಕೆ. ಉದಯ್ ಕುಮಾರ್ ಮತ್ತು ಅನ್ನಪೂರ್ಣೇಶ್ವರಿ ಪಿ. ದಂಪತಿಗಳಪುತ್ರ. ಇವರಿಗೆ ಸಂಸ್ಥೆಯ ಕರಾಟೆ ಶಿಕ್ಷಕರಾದ, ಜಪಾನ್ ಶೊಟೊಕಾನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ತರಬೇತಿ ಸಂಸ್ಥೆಯ ತರಬೇತುದಾರರಾದ ಶಿವಪ್ರಸಾದ್ ಡಿ. ಇವರು ತರಬೇತಿ ನೀಡಿರುತ್ತಾರೆ.
ಈ ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾAಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ, ಪೋಷಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು