Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದಿ.ಭಾಸ್ಕರ ಬಿ ಅವರ ಸಮರ್ಪಣಾ ಮನೋಭಾವ ನಮಗೆಲ್ಲ ಮಾದರಿ:ಡಾ.ಪ್ರಭಾಕರ್ ಭಟ್ ಕಲ್ಲಡ್ಕ – ಕಹಳೆ ನ್ಯೂಸ್

ಪುತ್ತೂರು : ಕೆಲವರು ಮರಣ ಹೊಂದಿದಾಗ ಅವರ ದೇಹ ಮಾತ್ರ ಮಣ್ಣಾಗುತ್ತದೆ, ಆದರೆ ಅವರು ಮಾಡಿದ ಕಾರ್ಯ ಹಾಗೂ ನೆನಪು ನಮ್ಮೊಂದಿಗೆ ಶಾಶ್ವತವಾಗಿ ನೆಲೆಯೂರುತ್ತದೆ. ಅಂತವರ ಸಾಲಿನಲ್ಲಿ ನಮ್ಮ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಭಾಸ್ಕರ್ ಬಿ ಕೂಡ ಒಬ್ಬರು. ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು, ಎಲ್ಲರಿಗೂ ಮಾರ್ಗದರ್ಶಕರಾಗಿ ತನ್ನ ಬದುಕಿನುದ್ದಕ್ಕೂ ನಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿದವರು. ಶಿಕ್ಷಣ, ಕಾನೂನು, ಹಣಕಾಸು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರಿಗಿದ್ದ ಜ್ಞಾನ ಮಟ್ಟ ಹುಬ್ಬೇರಿಸುವಂತದ್ದು. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಪ್ಪಟ ಕಾರ್ಯಕರ್ತನಾಗಿದ್ದು ಪ್ರತಿಯೊಬ್ಬರ ಪ್ರೀತಿಯನ್ನು ಗಳಿಸಿಕೊಂಡ ಒಬ್ಬ ಅದ್ಭುತ ವ್ಯಕ್ತಿತ್ವ ಭಾಸ್ಕರ್ ಅವರದ್ದು. ಅಂತಹ ನಮ್ಮ ಸಂಸ್ಥೆಯ ನಿಧಿಯನ್ನೇ ಇಂದು ವಿಧಿ ತನ್ನಲ್ಲಿಗೆ ಕರೆದುಕೊಂಡಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ಇತ್ತೀಚೆಗೆ ಮಂಗಳೂರಿನ ಕೆಪಿಟಿ ಬಳಿ ನಡೆದ ಅಪಘಾತದಲ್ಲಿ ಮೃತರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿ.ಭಾಸ್ಕರ್ ಬಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲರೊಂದಿಗೂ ಸದಾ ನಗು ಮುಖದಿಂದ ಮಾತನಾಡಿ ಸಂಬAಧವನ್ನು ಉಳಿಸಿಕೊಂಡವರು ಇವರು. ನಮ್ಮ ಸ್ವಾಯತ್ತ ಕಾಲೇಜಿಗೆ ಒಂದು ದೊಡ್ಡ ಶಕ್ತಿಯಾಗಿ ನಿಂತವರು. ವ್ಯಕ್ತಿಸಂಬAಧಗಳನ್ನು ಹೇಗೆ ಉಳಿಸಿಕೊಂಡು ಹೋಗಬಹುದು ಎಂಬುದನ್ನು ನಾವೆಲ್ಲರೂ ಇವರಿಂದ ಕಲಿತುಕೊಳ್ಳಬಹುದಾಗಿತ್ತು. ಸಮಾಜದ ಕಾರ್ಯಕ್ಕಾಗಿ ತನ್ನ ಜೀವವನ್ನೇ ಸವೆದುಕೊಂಡ ಸಮರ್ಪಣಾ ಜೀವ ಇವರದು. ಒಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ತನ್ನ ಆಧಾರ ಸ್ತಂಭವನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.)ದ ಅಂಗ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪ್ರಮುಖರು, ನಿವೃತ್ತ ಪ್ರಾಂಶುಪಾಲರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಹಿತೈಷಿಗಳು ಹಾಗೂ ದಿ.ಭಾಸ್ಕರ್ ಅವರ ಮನೆಯವರು ಉಪಸ್ಥಿತರಿದ್ದರು.

ದಿ.ಭಾಸ್ಕರ್ ಬಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆ ಯನ್ನು ಮಾಡಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನಘ ವೈಯಕ್ತಿಕ ಗೀತೆಯ ಮೂಲಕ ಭಾವ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ನಿರ್ವಹಿಸಿದರು.