Wednesday, April 2, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪೋಷಕರ ಸಮಾವೇಶ-ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರೇರಣಾ ಸಭಾಂಗಣದಲ್ಲಿ ಪದವಿ ವಿಭಾಗದ ಪೋಷಕರ ಸಮಾವೇಶವು ನಡೆಯಿತು. ಹಿರಿಯರು ಭಾರತಮಾತೆಯ ಬಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆರಂಭಗೊAಡ ಕಾರ್ಯಕ್ರಮವು ಬಳಿಕ ಎಲ್ಲಾ ಉಪನ್ಯಾಸಕರು ತಮ್ಮ ಕಿರು ಪರಿಚಯವನ್ನು ಮಾಡಿದ ಬಳಿಕ ಪೋಷಕರು ತಮ್ಮ ಮಕ್ಕಳು ಮತ್ತು ಸಂಸ್ಥೆಯ ಕುರಿತಾಗಿ ಧನಾತ್ಮಕವಾಗಿ ಮಾತನಾಡಿದರು.

ಬಳಿಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ, ಶ್ರೀರಾಮ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪ್ರಭಾಕರ್ ಭಟ್ ಕಲ್ಲಡ್ಕ ಇವರು ವಿದ್ಯಾಸಂಸ್ಥೆ ಬೆಳೆದು ಬಂದ ಹಾದಿ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಮತ್ತು ವಿದ್ಯಾಸಂಸ್ಥೆಗೆ ಪೋಷಕರ ಸಹಕಾರ ಕುರಿತಾಗಿ ಶುಭಾಂಸ ನುಡಿಗಳನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ 2024-25 ನೆ ಸಾಲಿನ ಪೋಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಶ್ರೀಮಾನ್ ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯಾದ ಮನ್ವಿತ (ತೃತೀಯ ಬಿ. ಕಾಂ) ಪ್ರಾರ್ಥನೆ ಮಾಡಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಯತಿರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ