ಪ್ರಧಾನ ಮಂತ್ರಿಯವರ ಜನೋಪಯೋಗಿ ಯೋಜನೆಯನ್ನು ಮನೆ ಮನೆಗೆ ತಲುಪಿಸಿದ ಅಂಚೆ ಸಿಬ್ಬಂದಿಗಳ ಮಾದರಿ ಕಾರ್ಯಕ್ಕೆ ಪ್ರಧಾನಿಯವರಿಂದ ಅಭಿನಂದನೆ – ಕಹಳೆ ನ್ಯೂಸ್
ಕಾರ್ಕಳ : ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ಅಂಚೆ ಇಲಾಖೆ , ಭ್ರಷ್ಟಾಚಾರ ರಹಿತವಾಗಿ ಜನರ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದು, ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಡಿಜಿಟಲ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ, ಮನೆಬಾಗಿಲಿಗೆ ಎ.ಟಿ.ಎಮ್ ವ್ಯವಸ್ಥೆ, ಅಪಘಾತ ವಿಮೆ, ಪಿಂಚಣಿ , ಪಾರ್ಸೆಲ್ , ಲೆಟರ್, ಉತ್ತಮ ರೀತಿಯ ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಇಂತಹ ಹತ್ತು ಹಲವಾರು ಯೋಜನೆಗಳನ್ನು ಜನತೆಗೆ ತಲುಪಿಸುವುದರ ಜೊತೆಗೆ ಅವರ ಉತ್ತಮ ಭವಿಷ್ಯವನ್ನು ರೂಪಿಸುತ್ತಿದೆ.
ಅಂತೆಯೇ ಆಶಕ್ತರ ಮನೆಗೆ ತೆರಳಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡುವ ಮೂಲಕ ಒಟ್ಟು 317 ಅಶಕ್ತರ ಮನೆ ಬಾಗಿಲಿಗೆ ಸೇವೆಯನ್ನು ನೀಡಿದ್ದು, ಸುಮಾರು 1000 ಕ್ಕಿಂತಲೂ ಹೆಚ್ಚಿನ ಆಧಾರ್ ನೋಂದಣಿ ತಿದ್ದುಪಡಿ ಶಿಬಿರವನ್ನು ( ಅಂಚೆ ಜನ ಸಂಪರ್ಕ ಅಭಿಯಾನ) ವನ್ನು ಆಯೋಜನೆ ಮಾಡಿದ್ದು, ಪುತ್ತೂರು ಅಂಚೆ ವಿಭಾಗದ ಈ ಜನೋಪಯೋಗಿ ಸೇವೆಯನ್ನು ಕೇಂದ್ರ ಸರಕಾರದ ಸಂಸತ್ತಿನ ಸದಸ್ಯರಾದ ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದು , ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯವನ್ನು ಪೋಸ್ಟ್ ಮಾಡಿರುವುದರಿಂದ , ಭಾರತ ಸರಕಾರದ ಮಾನ್ಯ ಪ್ರಧಾನ ಮಂತ್ರಿಯವರ ಮೆಚ್ಚುಗೆಗೂ ಪಾತ್ರರಾಗಿದೆ.
ಕೇಂದ್ರ ಸರಕಾರದ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಜನೋಪಯೋಗಿ ಯೋಜನೆಗಳನ್ನು ಜನತೆಗೆ ಅತ್ಯಂತ ಸುಲಭ ರೀತಿಯಲ್ಲಿ ದೊರೆಯಬೇಕೆನ್ನುವ ಅವರ ಹಂಬಲದಂತೆ, ಅಂಚೆ ಸಿಬ್ಬಂದಿಗಳ ಈ ಮಾದರಿ ಕಾರ್ಯಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದು. ಅಂಚೆ ಇಲಾಖೆಯ ಅತ್ಯುತ್ತಮ ಸೇವಾ ಯೋಜನೆಗಳು ಇನ್ನಷ್ಟು ಜನರಿಗೆ ತಲುಪಾವಂತಾಗಲಿ ಎಂದು ಪ್ರಧಾನಿಯವರು ಶುಭ ಹಾರೈಸಿದ್ದಾರೆ.
ಮರ್ಣೆ ಗ್ರಾಮ , ಎಣ್ಣೆಹೊಳೆ ಅಂಚೆ ಡೊಂಬರಪಲ್ಕೆ ನಿವಾಸಿ ಶ್ರೀ ದಿನೇಶ್ ಮತ್ತು ಉಷಾ ದಂಪತಿಯ 10 ವರ್ಷದ ಪುತ್ರಿ ಕುಮಾರಿ ತೃಷಾ ದಿನೇಶ್ ಪೂಜಾರಿ ಇವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು , ತಾಯಿಯೂ ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು , ತೀರಾ ಬಡ ಕುಟುಂಬದವರಾದ ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿ ಮಾಡಬೇಕಾಗಿದ್ದು , ಇದರ ಅಪ್ಡೇಟ್ ಅಂಚೆ ಕಚೇರಿಗೆ ಭೇಟಿ ನೀಡಿ ಮಾಡಿಸಲು ಅಸಾಧ್ಯವಾಗಿದ್ದು , ಕಾರ್ಕಳ ಪ್ರಧಾನ ಅಂಚೆ ಕಚೇರಿಗೆ ಮಾಹಿತಿಯನ್ನು ತಿಳಿಸಿ , ಮನೆಗೆ ತೆರಳಿ ಅಪ್ಡೇಟ್ ಮಾಡಲು ಮನವಿಯನ್ನು ನೀಡಿದ್ದು , ಇವರ ಮನವಿಗೆ ಸ್ಪಂದಿಸಿ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡವು ಮನೆಗೆ ತೆರಳಿ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿಯನ್ನು ಮಾಡಿಸಿಕೊಡಲಾಯಿತು . ಈ ಕುಟುಂಬವು ಅಂಚೆ ಇಲಾಖೆಗೆ ಮನಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.