Sunday, January 19, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಅರಂತೋಡು: ಕಾಡಾನೆಗಳಿಂದ ಕೃಷಿ ಹಾನಿ-ಕಹಳೆ ನ್ಯೂಸ್

ಅರಂತೋಡು: ತೊಡಿಕಾನ ಸಮೀಪದ ಬಂಗಾರ ಕೋಡಿಯಲ್ಲಿ ಗುರುವಾರ ರಾತ್ರಿ ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ, ಬೆಳೆಗಳನ್ನು ನಾಶಪಡಿಸಿದ ಘಟನೆ ವರದಿಯಾಗಿದೆ.
ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 10 ಅಡಿಕೆ ಮರ, ಎರಡು ಬಾಳೆ, ಒಂದು ದೀವಿಹಲಸು ಮರವನ್ನು ಮುರಿದು ಹಾಕಿವೆ.
ಅಲ್ಲದೆ ಒಂದು ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.

ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಸರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಹಾಗೂ ಜನರು ಆತಂಕದಿAದಲೇ ದಿನದೂಡುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು