Sunday, January 19, 2025
ತುಮಕೂರುಸುದ್ದಿ

ತುಮಕೂರಿನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ!-ಕಹಳೆ ನ್ಯೂಸ್

ತುಮಕೂರು : ತುಮಕೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಸೊಸೆಯೊಬ್ಬಳು ಅತ್ತೆ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ತುಮಕೂರು ತಾಲೂಕಿನ ಕಲ್ಲುಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಅತ್ತೆಯ ಮೇಲೆ ಸೊಸೆ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಅತ್ತೆ ಸಾವನ್ನಪ್ಪಿದ್ದಾರೆ.
ಮೃತ ಅತ್ತೆ ಕೆಂಪಮ್ಮ ಎಂದು ಗುರುತಿಸಲಾಗಿದೆ. ಸೊಸೆ ಉಮಾದೇವಿ ಈ ಕೃತ್ಯ ಎಸಗಿದ್ದಾರೆ.

ಕ್ಷುಲ್ಲಕ ಕಾರಣಕ್ಕ ಅತ್ತೆ ಸೊಸೆ ನಡುವೆ ಜಗಳ ನಡೆದಿದ್ದು, ನಂತರ ಜಗಳ ತಾರಕಕ್ಕೇರಿದೆ. ಪರಿಣಾಮ ಸೊಸೆ ಅತ್ತೆ ಮೇಲೆ ಹಲ್ಲೆ ನಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೆಂಪಮ್ಮರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು