Friday, September 20, 2024
ಸುದ್ದಿ

ನಿಗದಿತ ಗುರಿ ಸಾಧನೆಗೆ ಸ್ಪರ್ಧಾತ್ಮಕ ಪರಿಕ್ಷೆಗಳು ಅಗತ್ಯ : ಶ್ರೀನಿವಾಸ ಪೈ – ಕಹಳೆ ನ್ಯೂಸ್

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಕನಸು ಕಾಣುತ್ತಾರೆ. ಆದರೆ, ಉದ್ಯೋಗ ಹುಡುಕಾಟದ ಸಂದರ್ಭದಲ್ಲಿ ಒದ್ದಾಟಕ್ಕೆ ಒಳಗಾಗುವುದು ಸಾಮಾನ್ಯ. ಆ ಹಂತದಲ್ಲಿ ಕೆಲವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿರುವ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಗಮನಹರಿಸಿ ತರಬೇತಿಯ ಮೊರೆ ಹೋಗುತ್ತಾರೆ. ಅದರಲ್ಲೂ ಉಪನ್ಯಾಸಕರಾಗಲು ಬಯಸುವವರು ನೆಟ್ ಅಥವ ಕೆ ಸೆಟ್ ಪರೀಕ್ಷೆಗಳನ್ನು ಉತ್ತೀರ್ಣವಾಗುವುದು ಅನಿವಾರ್ಯ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.

ಅವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ ಒಂದು ದಿನದ ‘ನೆಟ್ ಹಾಗೂ ಕೆ ಸೆಟ್ ಪರೀಕ್ಷೆಗೆ ಪೂರಕ ತರಬೇತಿ’ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿನ ದಿನಗಳಲ್ಲಿ ಅನೇಕ ಹುದ್ದೆಗಳಿಗೆ ಪದವಿಯ ಪ್ರಮಾಣ ಪತ್ರಗಳು ಕೈಗೆ ಸಿಕ್ಕಿದರೆ ಸಾಕಾಗುವುದಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅದರೊಂದಿಗೆ, ಗುರುಹಿರಿಯರಿಂದ ಪಡೆದ ಮಾರ್ಗದರ್ಶನವೂ ಮುಖ್ಯ. ಕಾರ್ಯಾಗಾರಗಳಿಂದ ಹೆಚ್ಚಿನ ಜ್ಞಾನ ದೊರೆಯುವುದಕ್ಕೆ ಸಾಧ್ಯ ಎಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಪು ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಸಂಧ್ಯಾ ಮಾತ£ದ್ದೀಗಿನ ನೆಟ್ ಅಥವ ಕೆ ಸೆಟ್ ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಅವಕಾಶಗಳೂ ಹೆಚ್ಚಾಗುತ್ತಿವೆ. ಅಲ್ಲದೆ ಆಯಾಯ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿಗಳನ್ನು ಶಾಲಾ ಕಾಲೇಜುಗಳಲ್ಲಿಟ್ನಡೆಸುವುದುಅನಿವಾರ್ಯ. ಪರೀಕ್ಷೆ ತಯಾರಿಗೆ ಸಂಬಂಧ ಪಟ್ಟ ಪ್ರಶ್ನೆ ಪತ್ರಿಕೆಗಳು ಆನ್‌ಲೈನ್ ನಲ್ಲಿ ಲಭ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಯೋಜನೆಗಳು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ನೆಟ್ ಮತ್ತು ಕೆ ಸೆಟ್‌ನಂತಹ ಪರೀಕ್ಷೆಗಳು ಕೇವಲ ಉಪನ್ಯಾಸಕ ವೃತ್ತಿಗೆ ಹೋಗುವವರಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಪರೀಕ್ಷೆಗಳು ವಿವಿಧ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸುವುದು ಮುಖ್ಯ. ಇದು ಶಿಕ್ಷಣದ ಜೊತೆಗೆ ಜ್ಞಾನದ ಸಂಪಾದನೆಗೆ ಅನುಕೂಲಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ ಹೆಚ್ ಜಿ ಶ್ರೀಧರ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ ವಿಜಯಸರಸ್ವತಿ ಬಿ ಪ್ರಸ್ತಾವನೆಗೈದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನನ್ಯಾ ವಿ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ವಂದಿಸಿದರು. ಉಪನ್ಯಾಸಕಿ ಲಕ್ಷಿ್ಮೀ ಭಟ್ ನಿರೂಪಿಸಿದರು.